ETV Bharat / state

7 ವರ್ಷಗಳಿಂದ ಶೌಚಾಲಯದಲ್ಲೇ ವಾಸವಿದ್ದ ಕುಟುಂಬ: ಇಬ್ಬರು ಅಧಿಕಾರಿಗಳಿಗೆ ನೋಟಿಸ್

author img

By

Published : Dec 20, 2019, 4:53 PM IST

ಮೈಸೂರಿನ ರಾಜೇಂದ್ರ ನಗರದ ಕುರಿಮಂಡಿ ಎ ಬ್ಲಾಕ್ ನಲ್ಲಿದ್ದ ಸಾರ್ವಜನಿಕ ಶೌಚಾಲಯದಲ್ಲಿ ಕಳೆದ 7 ವರ್ಷಗಳಿಂದ ಕುಟುಂಬವೊಂದು ವಾಸವಿತ್ತು. ಆದರೆ, ಈ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನಲೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.

Family lived in the toilet for 7 years: notice to two officers
7 ವರ್ಷಗಳಿಂದ ಶೌಚಾಲಯದಲ್ಲಿ ವಾಸವಿದ್ದ ಕುಟುಂಬ: ಇಬ್ಬರು ಅಧಿಕಾರಿಗಳಿಗೆ ನೋಟಿಸ್

ಮೈಸೂರು: ನಗರದ ಸಾರ್ವಜನಿಕ ಶೌಚಾಲಯದಲ್ಲಿ ಕುಟುಂಬವೊಂದು ಕಳೆದ 7 ವರ್ಷಗಳಿಂದ ವಾಸವಿತ್ತು. ಈ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನಲೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಕೊಳಗೇರಿ ಮಂಡಳಿಯ ಇಇ ಚೆನ್ನಕೇಶವಯ್ಯ ತಿಳಿಸಿದ್ದಾರೆ.

ರಾಜೇಂದ್ರ ನಗರದ ಕುರಿಮಂಡಿ ಎ ಬ್ಲಾಕ್ ನಲ್ಲಿದ್ದ ಸಾರ್ವಜನಿಕ ಶೌಚಾಲಯದಲ್ಲಿ ಕೃಷ್ಣಮ್ಮ ಕುಟುಂಬಸ್ಥರು ವಾಸವಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಎಇಇ ತೇಜಸ್ವಿನಿ ಮತ್ತು ಎಇ ನಸ್ರತ್ ಅವರಿಗೆ ನೋಟಿಸ್ ಜಾರಿಯಾಗಿದೆ.

ಶೌಚಾಲಯದಲ್ಲೇ ಜೀವನ... ಮನಕಲಕುತ್ತೆ ಈ ಕುಟುಂಬದ ಕರುಣಾಜನಕ ಸ್ಥಿತಿ

ಶೌಚಾಲಯದಲ್ಲಿ ಇರಲು ಅವಕಾಶ ನೀಡಿದ ವ್ಯಕ್ತಿಯ ವಿರುದ್ಧ ದೂರು ದಾಖಲು:

ಗುಡಿಸಲಿನಲ್ಲಿ ವಾಸವಿದ್ದ ಕೃಷ್ಣಮ್ಮ ಕುಟುಂಬಕ್ಕೆ ಶೌಚಾಲಯದಲ್ಲಿ ಇರಲು ಸ್ಥಳೀಯ ಮುಖಂಡನೋರ್ವ ಅವಕಾಶ ನೀಡಿದ ಹಿನ್ನೆಲೆ ಆ ವ್ಯಕ್ತಿಯ ವಿರುದ್ಧವೂ ಎನ್.ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ತನಿಖೆ ನಡೆಸಿ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಜಿಲ್ಲಾಡಳಿತವು ಕೃಷ್ಣಮ್ಮ ಅವರ ಕುಟುಂಬಕ್ಕೆ ತಾತ್ಕಾಲಿಕವಾಗಿ ಮನೆಯೊಂದರಲ್ಲಿ ಆಶ್ರಯ ಕಲ್ಪಿಸಿದ್ದು, 3-4 ದಿನಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದೆ.

Intro:ಮೈಸೂರು: ನಗರದಲ್ಲಿ ಕಳೆದ ೭ ವರ್ಷದಿಂದ ಸಾರ್ವಜನಿಕ ಶೌಚಾಲಯದಲ್ಲೇ ವಾಸವಿದ್ದ ಕುಟುಂಬದ ಪ್ರಕರಣದ ಸಂಬಂಧ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಬ್ಬರು ಅಧಿಕಾರಿಗಳಿಗೆ, ಮಂಡಳಿಯ ಇಇ ಚೆನ್ನಕೇಶವಯ್ಯ ಅವರು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.Body:

ರಾಜೇಂದ್ರ ನಗರದ ಕುರಿಮಂಡಿ ಎ ಬ್ಲಾಕ್ ನಲ್ಲಿ ಇದ್ದ ಸಾರ್ವಜನಿಕ ಶೌಚಾಲಯವೊಂದರಲ್ಲಿ ಕಳೆದ ೭ ವರ್ಷದಿಂದ ಕೃಷ್ಣಮ್ಮ ಕುಟುಂಬದವರು ವಾಸವಿದ್ದು , ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿದ್ದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಎಇಇ ತೇಜಸ್ವಿನಿ ಮತ್ತು ಎಇ ನಸ್ರತ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮಂಡಳಿಯ ಇಇ ಚೆನ್ನಕೇಶವಯ್ಯ ಅವರು ತಿಳಿಸಿದ್ದಾರೆ.

ಶೌಚಾಲಯದಲ್ಲಿ ಇರಲು ಅವಕಾಶ ನೀಡಿದ ವ್ಯಕ್ತಿಯ ವಿರುದ್ಧ ದೂರು ದಾಖಲು

ಗುಡಿಸಲಿನಲ್ಲಿ ವಾಸವಿದ್ದ ಕೃಷ್ಣಮ್ಮ ಕುಟುಂಬಕ್ಕೆ ಶೌಚಾಲಯದಲ್ಲಿ ಇರಲು ಸ್ಥಳೀಯ ಮುಖಂಡನೊಬ್ಬ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ವಿರುದ್ಧ ಎನ್.ಆರ್ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಹಾಗೂ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೋಲಿಸರು ತಿಳಿಸಿದ್ದಾರೆ.

ಕೃಷ್ಣಮ್ಮ ಅವರ ಕುಟುಂಬಕ್ಕೆ ತಾತ್ಕಾಲಿಕವಾಗಿ ಯಾವುದಾದರೂ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದು ಇನ್ನೂ ೩-೪ ದಿನಗಳಲ್ಲಿ ಮನೆ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.