ETV Bharat / state

ಸುತ್ತೂರು ಶಾಖಾ ಮಠಕ್ಕೆ ಹೆಚ್​​ಡಿಕೆ ಭೇಟಿ : ಜಿಟಿಡಿ ಬಿಟ್ಟು ಉಳಿದೆಲ್ಲ ಶಾಸಕರು ಹಾಜರ್ - ಕುಮಾರಸ್ವಾಮಿ ಸುತ್ತೂರು ಮಠ ಭೇಟಿ ವೇಳೆ ಜಿಟಿಡಿ ಗೈರು

ಇಂದು ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಚನ ಪಡೆದಿದ್ದಾರೆ. ಇನ್ನು ಇದೇ ವೇಳೆ ಎಲ್ಲಾ ಶಾಸಕರು ಹಾಜರಿದ್ದು, ಜಿಟಿ ದೇವೇಗೌಡ ಮಾತ್ರ ಗೈರಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ..

ex chief minister hd kumarswamy visits to sutturu matt
ಸುತ್ತೂರು ಮಠಕ್ಕೆ ಹೆಚ್​​ಡಿಕೆ ಭೇಟಿ
author img

By

Published : Dec 5, 2020, 10:46 AM IST

ಮೈಸೂರು : ಚಾಮುಂಡಿಬೆಟ್ಟದ ತಪ್ಪನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಹೆಚ್​ಡಿಕೆ ಜೊತೆ ಆಗಮಿಸಿದ ಶಾಸಕರಾದ ಸಾ ರಾ ಮಹೇಶ್,ಅಶ್ವಿನ್ ಕುಮಾರ್, ಕೆ.ಮಹದೇವ್, ಶ್ರೀಗಳ‌ ಜೊತೆ ಕುಶಲೋಪರಿ ಮಾತುಕತೆ ನಡೆಸಿದರು.

ಸುತ್ತೂರು ಮಠಕ್ಕೆ ಹೆಚ್​​ಡಿಕೆ ಭೇಟಿ

ದಳಪತಿಗಳ ಚಿತ್ತ ಇಂದು ಮಾಜಿ ಸಚಿವನತ್ತ : ಇಂದು ಬೆಳಗ್ಗೆ ಕುಮಾರಸ್ವಾಮಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಹುಕಾಲದಿಂದಲೂ ಸ್ವಪಕ್ಷದಲ್ಲೇ ಇದ್ದು ದೂರ ಉಳಿದಿದ್ದ ಮಾಜಿ ಸಚಿವ ಜಿ ಟಿ ದೇವೇಗೌಡ ಮಾತ್ರ ಗೈರಾಗಿದ್ದಾರೆ.

ಗ್ರಾಮ ಪಂಚಾಯತ್‌ ಚುನಾವಣೆ ಹಿನ್ನೆಲೆ ಇಂದು ಕುಮಾರಸ್ವಾಮಿ ಮೈಸೂರು ಭಾಗದ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಜಿಟಿಡಿ ಮನೆಗೆ ಹೆಚ್​​ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಪತ್ನಿ ಸಮೇತರಾಗಿ ಭೇಟಿ ನೀಡಿದ್ರು.

ಇದನ್ನೂ ಓದಿ: 15 ಲಕ್ಷ ದೀಪ ಬೆಳೆಗಿದ್ರೇ ಏನ್ ಬಂತು, ಮೋದಿ ರೈತರ ದೀಪ ಬೆಳಗಲಿ.. ಮಾಜಿ ಸಿಎಂ ಕುಮಾರಸ್ವಾಮಿ

ಜಿಟಿಡಿ ಜೆಡಿಎಸ್​ನಲ್ಲೇ ಇದ್ದಾರೆ ಎಂದಿದ್ದ ಹೆಚ್​​ಡಿಕೆ : ಕುಮಾರಸ್ವಾಮಿ ಇತ್ತೀಚೆಗಷ್ಟೇ ಜಿಟಿಡಿ ಎಲ್ಲಿ ಹೋಗ್ತಾರೆ ನಮ್ಮ ಪಕ್ಷದಲ್ಲೇ ಇದ್ದಾರೆ ಅಂದಿದ್ರು. ಸದ್ಯ ಈ ಎಲ್ಲ ಗೊಂದಲಗಳಿಗೆ ಉತ್ತರ ಇಂದು ನಡೆಯುವ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜಿಟಿಡಿ ಭಾಗಿಯಾಗ್ತಾರೋ ಅಥವಾ ಇಲ್ಲವೋ ಎಂಬುದರಿಂದ ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.