ETV Bharat / state

ಮತ್ತೆ ಸಚಿವ ಸ್ಥಾನ ನೀಡದಿರುವುದು ಬೇಸರ ತಂದಿದೆ: ಕೆ.ಎಸ್.ಈಶ್ವರಪ್ಪ - Bharat Jodo

ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಮಂತ್ರಿಯಾಗುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ ಇನ್ನೂ ಸಚಿವ ಸ್ಥಾನ ನೀಡದಿರುವುದು ಸಹಜವಾಗಿಯೇ ಬೇಸರ ತಂದಿದೆ. ಆದರೂ ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಕೆ.ಎಸ್.ಈಶ್ವರಪ್ಪ ಅಸಮಾಧಾನ ಹೊರಹಾಕಿದರು.

ಕೆ ಎಸ್ ಈಶ್ವರಪ್ಪ
eshwarappa
author img

By

Published : Sep 16, 2022, 2:14 PM IST

ಮೈಸೂರು: ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡದಿರುವುದು ಸಹಜವಾಗಿಯೇ ಬೇಸರ ತಂದಿದೆ ಎಂದು ಮೈಸೂರಿನಲ್ಲಿ ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪ ಅಸಮಾಧಾನ ಹೊರಹಾಕಿದರು.

ಇಂದು ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಆಗಮಿಸಿ ತಾಯಿಯ ದರ್ಶನ ಪಡೆದ ನಂತರ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದೆ. ಆದರೆ, ನಾಯಕರುಗಳು ರಾಜೀನಾಮೆ ನೀಡುವುದು ಬೇಡ ಎಂದರೂ ನಾನೇ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ನೀಡಿದ್ದೆ. ಈಗ ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಮಂತ್ರಿಯಾಗುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ ಇನ್ನೂ ಸಚಿವ ಸ್ಥಾನ ನೀಡದಿರುವುದು ಸಹಜವಾಗಿಯೇ ಬೇಸರ ತಂದಿದೆ. ಆದರೂ ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ಎಲ್ಲವನ್ನು ನೀಡಿದೆ. ನನಗೆ ಮಂದಿ ನೋವು ಇದ್ದ ಕಾರಣ ಅಧಿವೇಶನದಲ್ಲಿ ಭಾಗವಹಿಸಿಲ್ಲ. ಈಗ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ, ಸೋಮವಾರದಿಂದ ಅಧಿವೇಶನದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕೆ ಎಸ್ ಈಶ್ವರಪ್ಪ

ಇದನ್ನೂ ಓದಿ: ಈಶ್ವರಪ್ಪಗೆ ಸಿಎಂ ಕ್ಲೀನ್‌ಚಿಟ್ ಕೊಟ್ಟಿರುವಾಗ ಪಾರದರ್ಶಕ ತನಿಖೆ ಹೇಗೆ ಸಾಧ್ಯ?: ಪರಿಷತ್ ಸದಸ್ಯ ಚನ್ನರಾಜ್

ಡಿ ಕೆ ಶಿವಕುಮಾರ್ ಹೇಳಿಕೆ ಸರಿಯಲ್ಲ: ನಾನು ಭಾರತ್ ಜೋಡೋ ಹಾಗೂ ವಿಧಾನ ಮಂಡಲ ಅಧಿವೇಶನದಲ್ಲಿ ಇರುವಾಗಲೇ ಇಡಿ ನೋಟಿಸ್ ಕೊಟ್ಟಿರುವುದು ರಾಜಕೀಯ ಪ್ರೇರಿತ ಎಂದು ಡಿ.ಕೆ.ಶಿವಕುಮಾರ್ ಹೇಳಿರುವುದು ಸರಿಯಲ್ಲ. ನೀವು ಈಗಾಗಲೇ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಇದ್ದೀರಿ. ನೀವು ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿ ಹೇಳಿಕೆಯನ್ನು ನೀಡಬಾರದು. ಜೊತೆಗೆ, ನೀವು ಇಂಧನ ಸಚಿವರಾಗಿದ್ದ ಸಂದರ್ಭದ ಕಡತಗಳನ್ನು ಕೊಡುವಂತೆ ಅಧಿಕಾರಿಗಳು ಕರೆ ಮಾಡುತ್ತಿದ್ದಾರೆ ಎಂಬ ಹೇಳಿಕೆಯು ಸಹಾ ಸರಿಯಲ್ಲ. ಅವುಗಳು ಸಾರ್ವಜನಿಕರ ಕಡತಗಳಾಗಿದ್ದು, ಯಾರು ಬೇಕಾದರೂ ಆರ್.ಟಿ.ಐ ದಾಖಲೆ ಸಲ್ಲಿಸಿ ಪಡೆದುಕೊಳ್ಳಬಹುದು ಎಂದರು.

ಪ್ರಧಾನಿಗೆ ಅಭಿನಂದನೆ: ಬೆಟ್ಟದ ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಿರುವ ಕೇಂದ್ರ ಸರ್ಕಾರದ ತೀರ್ಮಾನ ಸಂತೋಷ ತಂದಿದೆ. ಮೂರು ದಶಕಗಳ ಹೋರಾಟದಲ್ಲಿ ಸಮುದಾಯದ ಮಠಾಧೀಶರಿಂದ ಹೋರಾಟ ಫಲ ತಂದಿದ್ದು ಮೈಸೂರು, ಮಡಿಕೇರಿ ಹಾಗೂ ಗಡಿ ಭಾಗದ ಜನರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ: ಘೋಷಣೆಯಾಗದ ಸಚಿವ ಸ್ಥಾನ: ಸಿಎಂ ಎದುರೇ ಯತ್ನಾಳ್ ಅಸಮಾಧಾನ​

ಈ ದೇಶದಲ್ಲಿ ಉಳ್ಳವರಿಗೆ ಮಾತ್ರ ಮೀಸಲಾತಿ ಸೌಲಭ್ಯ ಈಗಲೂ ಸಿಗುತ್ತಿದ್ದು, ಈ ಮೀಸಲಾತಿ ಸೌಲಭ್ಯದ ಜೊತೆಗೆ ಕಡು ಬಡವರಿಗೂ ರಾಜಕೀಯ ಮೀಸಲಾತಿ ಸಿಗಬೇಕು. ಹಾಗೂ ವಿಧಾನ ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಸೂದೆ ಪಾಸಾಗಿರುವುದು ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.

ಇನ್ನು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕೈಗೊಂಡಿರುವುದು ಸರಿ. ಆದರೆ, ಭಾರತವನ್ನು ಒಡೆದದ್ದೇ ಕಾಂಗ್ರೆಸ್​ನವರು ಅದನ್ನು ಜೋಡಿಸುವ ಕೆಲಸ ಅವ್ರೇ ಮಾಡುತ್ತಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕಾಂಗ್ರೆಸ್​ನವರು ಬಲಿ ಪಡೆದಿದ್ದಾರೆ. ಈಗ ಭಾರತ್ ಜೋಡೋ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸ್ಲೋಗನ್ ಬದಲಾವಣೆ ಮಾಡಿಕೊಳ್ಳಿ. ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿ ಈ ಕಾರ್ಯಕ್ರಮ ಎಂದು ಹೇಳಿ. ಅಖಂಡ ಭಾರತ ಒಂದುಗೂಡಬೇಕು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲವೂ ಒಟ್ಟಾಗಿ ಅಖಂಡ ಭಾರತವಾಗಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದರು.

ಇದನ್ನೂ ಓದಿ: ಸಂತೋಷ್​ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್​ ಸಲ್ಲಿಕೆ : ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.