ಮೈಸೂರು : ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿರುವುದರಿಂದ ಬೆಟ್ಟದ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಆಷಾಢ ಅಮಾವಾಸ್ಯೆ ಇರುವುದರಿಂದ ಇಂದು ಚಾಮುಂಡಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ನಾಳೆ, ನಾಡಿದ್ದು ವಾರಾಂತ್ಯವಾಗಿರುವುದರಿಂದ ಸೋಮವಾರದವರೆಗೆ ನಿರ್ಬಂಧ ಮುಂದುವರಿಸಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನ ಸಂಪರ್ಕಿಸುವ ಎಲ್ಲಾ ಮಾರ್ಗಗಳಿಗೆ ಬ್ಯಾರಿಕೇಡ್ ಹಾಕಿ, ಪೊಲೀಸರನ್ನ ನಿಯೋಜಿಸಲಾಗಿದೆ.
ಪ್ರತಿ ಆಷಾಢ ಶುಕ್ರವಾರ ಹಾಗೂ ಶನಿವಾರ, ಭಾನುವಾರದಂದು ಭಕ್ತರಿಗೆ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದನ್ನೂ ಓದಿ:ನನ್ನ ಸಿನಿಮಾ ಎಷ್ಟು ದುಡಿಯಬಲ್ಲದು ಎನ್ನುವುದು ನನಗೆ ಗೊತ್ತು : ನಟ ವಿನೋದ್ ಪ್ರಭಾಕರ್
ಚಾಮುಂಡಿ ಬೆಟ್ಟದ ನಿವಾಸಿಗಳು ಗುರುತಿನ ಚೀಟಿ ತೋರಿಸಿ ಸಂಜೆ 6 ಗಂಟೆವರೆಗೆ ಸಂಚಾರ ಮಾಡಬಹುದು. ಆ ನಂತರ ಎಲ್ಲವೂ ಸಂಪೂರ್ಣ ಬಂದ್ ಆಗಲಿದೆ.