ಮೈಸೂರು: ಒಂಟಿ ಸಲಗವೊಂದು ವೀರನಹೊಸಹಳ್ಳಿ ಭಾಗದ ಗ್ರಾಮಗಳ ರಸ್ತೆಗಳಲ್ಲಿ ಓಡಾಟ ನಡೆಸಿದ್ದು, ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವ ವ್ಯಾಪ್ತಿಯ ವೀರನಹೊಸಹಳ್ಳಿ ಭಾಗದ ಹಳೆ ತೆಂಗಿನಹಳ್ಳಿ ಹಾಗೂ ನಾಗಾಪುರ ಹಾಡಿಯ ವೃತ್ತದ ಬಳಿ ಕೆಲ ದಿನಗಳಿಂದ ಸಂಜೆ ಸಮಯದಲ್ಲಿ ಒಂಟಿ ಸಲಗ ಓಡಾಡುತ್ತಿದ್ದು, ನಿನ್ನೆ ಗ್ರಾಮದ ಮನೆಯ ಗೋಡೆಯೊಂದನ್ನು ಕೆಡವಿ ಹಾಕಿ ರಂಪಾಟ ಮಾಡಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಭಾಗದ ಕಾಡಿನ ಒಳಗೆ ಜೆಸಿಬಿ ಕೆಲಸ ಮಾಡುತ್ತಿದ್ದು, ಟ್ರ್ಯಾಕ್ಟರ್, ಲಾರಿ ಶಬ್ದದಿಂದ ಕಾಡಿನಲ್ಲಿರುವ ಪ್ರಾಣಿಗಳು ಇಲ್ಲಿಗೆ ಬರುತ್ತಿವೆ. ಕೂಡಲೇ ಸಲಗವನ್ನು ಕಾಡಿನೊಳಗೆ ಅಟ್ಟಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.