ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಸಂಪೂರ್ಣವಾಗಿ ಯಶಸ್ವಿಯಾದ ಹಿನ್ನೆಲೆ, ಕ್ಯಾಪ್ಟನ್ ಅಭಿಮನ್ಯುಗೆ ಮುತ್ತಿಟ್ಟು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಾವುತ ವಸಂತ ಭಾವುಕತೆಯಿಂದ ನಮಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಅರಮನೆ ಆವರಣದಲ್ಲಿ ತನ್ನ ಬಳಗದೊಂದಿಗೆ ಇದ್ದ ಕ್ಯಾಪ್ಟನ್ ಅಭಿಮನ್ಯುಗೆ ಬುಧವಾರ ನಡೆದ ಜಂಬೂಸವಾರಿ ಸವಾರಿ ಸವಾಲಾಗಿತ್ತು. ಎರಡು ವರ್ಷದ ನಂತರ ಅದ್ಧೂರಿಯಾಗಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಅಭಿಮನ್ಯು ಶಾಂತವಾಗಿ ಹಾಗೂ ಗಂಭೀರದಿಂದ ಹೆಜ್ಜೆ ಹಾಕಿ ಯಶಸ್ವಿಗೊಳಿಸಿದ್ದಾನೆ.
ನವರಾತ್ರಿ ಒಂಬತ್ತನೆಯ ದಿನ ಜಂಬೂಸವಾರಿ ಮೆರವಣಿಗೆ ಎಲ್ಲರ ಕೇಂದ್ರಬಿಂದುವಾಗಿತ್ತು. ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಮೇಲೆ ಜನರ ಪ್ರೀತಿ ಆರೈಕೆ ತುಂಬಿರುತ್ತದೆ. ಪ್ರೀತಿ ಹಾಗೂ ಆರೈಕೆಯೊಂದಿಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ಕೃಪೆಯಿಂದ ಅಭಿಮನ್ಯು ಜಂಬೂಸವಾರಿ ಯಶಸ್ವಿಗೊಳಿಸಿದ್ದಾನೆ. ಮೂರನೇ ಬಾರಿಗೆ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದ.
ಇದನ್ನೂ ಓದಿ: ತಾಲೀಮು ನಡೆಸಿದ್ರು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳದ ಹೊಸ ಆನೆಗಳು: ಬೇಸರ ವ್ಯಕ್ತಪಡಿಸಿದ ಮಾವುತರು