ಮೈಸೂರು: ಕುಡಿತದ ಚಟ ಬಿಡಿಸಲು ಯತ್ನಿಸಿದ ಪತ್ನಿಯನ್ನು ಪತಿಯು ಕೊಲೆಗೈದಿರುವ ಘಟನೆ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉದಯಗಿರಿ ಎ.ಕೆ.ಕಾಲೋನಿಯ ಸಂಧ್ಯಾ (23) ಕೊಲೆಯಾದ ದುರ್ದೈವಿ. ಕಿರಣ್(27) ಕೊಲೆಗೈದ ಆರೋಪಿ ಪತಿ.
ಇವರಿಬ್ಬರು ಪರಸ್ವರ ಪ್ರೀತಿಸಿ, ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ ಒಂದು ಮಗು ಕೂಡ ಇದೆ. ಕುಡಿತದ ಚಟವಿದ್ದ ಕಿರಣ್ ಮತ್ತು ಪತ್ನಿ ಸಂಧ್ಯಾ ನಡುವೆ ಜಗಳ ನಡೆಯುತ್ತಿತ್ತಂತೆ. ನಂತರ ಕುಡಿತ ಬಿಡಲು ಮೂರು ತಿಂಗಳ ಕಾಲ ಪುನರ್ವಸತಿ ಕೇಂದ್ರದಲ್ಲಿದ್ದ ಕಿರಣ್ ಅಲ್ಲಿಂದ ವಾಪಸ್ಸಾದ ಬಳಿಕ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ.
ಶನಿವಾರ ರಾತ್ರಿ ಮತ್ತೆ ಪತಿ-ಪತ್ನಿ ನಡುವೆ ಜಗಳ ಶುರುವಾಗಿ ಕಿರಣ್, ಪತ್ನಿ ಸಂಧ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಕಿರಣ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು,ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಾವೋವಾದಿಗಳ ಹಿಂಸಾತ್ಮಕ ಹಾದಿ ಖಂಡಿಸಲು ಸಾಮಾಜಿಕ ಮಾಧ್ಯಮ ಬಳಸಿ: ಕೇಂದ್ರ ಗೃಹ ಸಚಿವಾಲಯ