ETV Bharat / state

ಮೈಸೂರು ನಗರದ ನೂತನ ಪೊಲೀಸ್​​​​ ಆಯುಕ್ತರಾಗಿ ಡಾ. ಚಂದ್ರಗುಪ್ತ ಅಧಿಕಾರ ಸ್ವೀಕಾರ

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಮಿಷನರ್ ಆಗಿ ಕಾರ್ಯನಿರ್ವಹಿಸಿ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗದ ಡಿಐಜಿ ಆಗಿ ವರ್ಗಾವಣೆಗೊಂಡಿರುವ ಕೆ.ಟಿ.ಬಾಲಕೃಷ್ಞ ಅವರಿಂದ ‌ಡಾ. ಚಂದ್ರಗುಪ್ತ ಅಧಿಕಾರ ಸ್ವೀಕರಿಸಿದರು.

new Police Commissioner of Mysore
new Police Commissioner of Mysore
author img

By

Published : Feb 1, 2020, 9:27 PM IST

ಮೈಸೂರು: ನಗರದ ನೂತನ ಪೊಲೀಸ್ ಆಯುಕ್ತರಾಗಿ ಡಾ. ಚಂದ್ರಗುಪ್ತ ಶನಿವಾರ ಅಧಿಕಾರ ಸ್ವೀಕರಿಸಿದರು.

ನಜರ್​​ಬಾದ್​ನಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಮಿಷನರ್ ಆಗಿ ಕಾರ್ಯನಿರ್ವಹಿಸಿ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗದ ಡಿಐಜಿ ಆಗಿ ವರ್ಗಾವಣೆಗೊಂಡಿರುವ ಕೆ.ಟಿ.ಬಾಲಕೃಷ್ಞ ಅವರಿಂದ ‌ಡಾ. ಚಂದ್ರಗುಪ್ತ ಅಧಿಕಾರ ಸ್ವೀಕರಿಸಿದರು. 2006ರ ಐಪಿಎಸ್‌ ಬ್ಯಾಚ್​​​ನ ಅಧಿಕಾರಿಯಾಗಿರುವ ಚಂದ್ರಗುಪ್ತ, ಬಂಧೀಖಾನೆ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೈಸೂರಿನಿಂದ ವರ್ಗಾವಣೆಗೊಂಡಿರುವ ಕೆ.ಟಿ.ಬಾಲಕೃಷ್ಣ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೈಸೂರಿನಲ್ಲಿ‌ ಕರ್ತವ್ಯ ನಿರ್ವಹಿಸಿರುವುದಕ್ಕೆ ಆತ್ಮ ತೃಪ್ತಿ ಇದೆ. ಹಲವು ಕಠಿಣ ಪರಿಸ್ಥಿತಿ ಎದುರಿಸಿದ್ದೀನಿ. ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರೂ ಮುಖ್ಯವಾಗಿತ್ತು‌ ಎಂದರು.

ನಂತರ ಡಾ. ಚಂದ್ರಗುಪ್ತ ಮಾತನಾಡಿ, ಮೈಸೂರಿಗೆ ತನ್ನದೇ ಇತಿಹಾಸ ಹಾಗೂ ಪರಂಪರೆ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.