ಮೈಸೂರು: ವರದಕ್ಷಿಣಿ ಕಿರುಕುಳಕ್ಕೆ ಬೆಂಕಿ ಹಚ್ಚಿದ ಗಂಡನನ್ನೇ ಹೆಂಡತಿ ತಬ್ಬಿಕೊಂಡ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ರಾಜೇಶ್ವರಿ (28) ಮೃತಪಟ್ಟಿದ್ದಾರೆ. ಮಹಿಳೆ ಪತಿ ಹರೀಶ್ ಬದುಕುಳಿದಿದ್ದು, ಚಿಂತಾಜನ ಸ್ಥಿತಿಯಲ್ಲಿದ್ದಾನೆ.
ಹೆಂಡತಿಗೆ ಬೆಂಕಿ ಹಚ್ಚಿದ ಗಂಡ: ವರದಕ್ಷಿಣೆ ವಿಷಯಕ್ಕೆ ರಾಜೇಶ್ವರಿ ಮೇಲೆ ಪತಿ ಹರೀಶ್ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದನಂತೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಜೀವ ಭಯದಿಂದ ಪತ್ನಿಯು ಪತಿಯನ್ನು ಅಪ್ಪಿಕೊಂಡಿದ್ದಳು ಎನ್ನಲಾಗಿದೆ. ಮಹಿಳೆ ದೇಹ ಸಂಪೂರ್ಣವಾಗಿ ಸುಟ್ಟಿದ್ದರಿಂದ ಮೃತಪಟ್ಟಿದ್ದಾಳೆ. ಆದರೆ ಪತಿಯ ದೇಹ ಭಾಗಶಃ ಸುಟ್ಟುಹೋಗಿದ್ದು, ಕೆ ಆರ್ ಆಸ್ಪತ್ರೆಯಲ್ಲಿ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ: ಹರದನಹಳ್ಳಿ ಗ್ರಾಮದ ಹರೀಶ್ ವರದಕ್ಷಿಣೆ ವಿಚಾರವಾಗಿ ತಡರಾತ್ರಿ ಪತ್ನಿ ಜೊತೆ ಗಲಾಟೆ ಮಾಡಿ, ಬಳಿಕ ತಾಳ್ಮೆ ಕಳೆದುಕೊಂಡು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನೆರೆ ಹೊರೆಯವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ಇಬ್ಬರಿಗೂ ಸಾಕಷ್ಟು ಸುಟ್ಟಗಾಯಗಳಾಗಿದ್ದವು. ರಾಜೇಶ್ವರಿ ಮೃತಪಟ್ಟಿದ್ದು, ಹರೀಶ್ಗೆ ಸ್ಥಿತಿ ಗಂಭೀರವಾಗಿದೆ.
ವರದಕ್ಷಿಣಿ ಕಿರುಕುಳ ಆರೋಪ: ವರದಕ್ಷಿಣೆ ಸಂಬಂಧ ತಮ್ಮ ಮಗಳ ಮೇಲೆ ಅಳಿಯ, ಅವನ ತಂದೆ ತಾಯಿ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಪೊಲೀಸ್ ಮೆಟ್ಟಿಲೇರಿದ್ದೆವು ಮತ್ತು ಹಲವು ಬಾರಿ ನ್ಯಾಯ ಪಂಚಾಯ್ತಿ ಕೂಡ ಮಾಡಲಾಗಿತ್ತು ಎಂದು ರಾಜೇಶ್ವರಿ ತಂದೆ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
(ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ಮನೆಯ ಗೋಡೆಗಳ ಮೇಲೆ ಸೂಸೈಡ್ ನೋಟ್ ಬರೆದು ಮಹಿಳೆ ಆತ್ಮಹತ್ಯೆ)