ಮೈಸೂರು: ಇಲ್ಲಿನ ಅಗ್ರಹಾರದ ನಿವಾಸಿ ಎಂ.ಕುಮಾರ ನಾಯ್ಕ(52) ಅವರ ಅಂಗಾಂಗ ದಾನ ಮಾಡಿ, ಸಾವಿನಲ್ಲಿಯೂ ನಾಲ್ವರಿಗೆ ಜೀವದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ. ಕೆಲ ತಿಂಗಳ ಹಿಂದೆ ಅಪಘಾತವಾಗಿ ಕೋಮಾ ಸ್ಥಿತಿಯಲ್ಲಿದ್ದರು.
ಗಂಭೀರ ಸ್ಥಿತಿಯಲ್ಲಿದ್ದ ಎಂ.ಕುಮಾರ ನಾಯ್ಕ ಅವರನ್ನು ಡಿ.3ರಂದು ಮಧ್ಯಾಹ್ನ 1.51ಕ್ಕೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆ ತರಲಾಯಿತು. ಆರಂಭಿಕ ಸಿಟಿ ಸ್ಕ್ಯಾನಿಂಗ್ನಲ್ಲಿ ಮೆದುಳಿನ ಕಾಂಡದ ಇನ್ಫೆಕ್ಷನ್ ಗೋಚರಿಸಿತು. ಅವರನ್ನು ತೀವ್ರ ನಿಗಾವಹಿಸಲು ಜೀವ ರಕ್ಷದ ಬೆಂಬಲದೊಂದಿಗೆ ಐಸಿಯುಗೆ ಸ್ಥಳಾಂತರಿಸಲಾಯಿತು.
ಕುಮಾರ ನಾಯ್ಕ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದು, ಎರಡು ದಿನಗಳ ಕಾಲ ಐಸಿಯು ಸಪೋರ್ಟ್ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಡಿ.5 ರ ರಾತ್ರಿ 9.30ಕ್ಕೆ, ಮಾನವ ಅಂಗಾಂಗ ಕಸಿ ಕಾಯಿದೆ 1994ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳಿನ ನಿಷ್ಕ್ರಿಯೆ(ಬ್ರೆನ್ ಡೆಡ್) ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಮಾರ ನಾಯ್ಕರವರ ಕುಟುಂಬದವರು ಅಂಗಾಂಗ ದಾನ ಮಾಡಲು ಮುಂದೆ ಬಂದರು.
ಮಂಗಳವಾರ ರಾತ್ರಿ 8.45 ರ ಸುಮಾರಿಗೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಕುಮಾರ ನಾಯ್ಕ ಅವರ ಅಂಗಗಳನ್ನು (ಹೃದಯ ಕವಾಟಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು) ಕಸಿ ಮಾಡಲಾಯಿತು ಹಾಗೂ ರಾತ್ರಿ 7.20ಕ್ಕೆ ಕ್ರಾಸ್ ಕ್ಲಾಂಪ್ ಮಾಡಲಾಯಿತು.
ಅಂಗದಾನ ಪಡೆದ ಆಸ್ಪತ್ರೆಗೆ: ಬೆಂಗಳೂರಿನ ಎಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಗೆ ಹೃದಯ ಕವಾಟಗಳು, ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಲಿವರ್, ಜೆಎಸ್‌ಎಸ್ ಆಸ್ಪತ್ರೆಗೆ ಕಾರ್ನಿಯಾಸ್ನ್ನು ದಾನ ಮಾಡಲಾಗಿದೆ.
ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡು ಸಾವು: ಅಂಗಾಂಗದಾನ ಮಾಡಿ ಸಾರ್ಥಕತೆ ಮೆರೆದ ಶಿಕ್ಷಕಿ