ಮೈಸೂರು: ಪಿಜಿ ಆಯುರ್ವೇದದ ಶಾಲ್ಯ ಮತ್ತು ಶಾಲಕ್ಯ ಓದಿದವರು ಮಾಡಬಹುದಾದ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಅನುಮತಿ ನೀಡುವ ಕೇಂದ್ರೀಯ ಭಾರತೀಯ ಔಷಧ ಪರಿಷತ್ತು ವಿರುದ್ಧ ವೈದ್ಯರು ಕರ್ತವ್ಯದ ನಡುವೆಯೂ ಕಪ್ಪುಪಟ್ಟಿ ಧರಿಸಿ ಇಂದಿನಿಂದ ಶುಕ್ರವಾರದವರೆಗೂ ಮುಷ್ಕರ ಕೈಗೊಂಡಿದ್ದೇವೆ ಎಂದು ಐಎಂಎ ಪದಾಧಿಕಾರಿಗಳು ತಿಳಿಸಿದರು.
ಓದಿ: ಮೈಸೂರಲ್ಲಿ ಮದುವೆ ದಿನವೇ ವಧುವಿಗೆ ಕೈಕೊಟ್ಟ ವರ: ಪ್ರಿಯತಮೆಯೊಂದಿಗೆ ಎಸ್ಕೇಪ್ ಆದ ಮದುಮಗ!
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಐಎಂಎ ಅಧ್ಯಕ್ಷ ಡಾ.ಆನಂದ ರವಿ ಮಾತನಾಡಿ, ಪಿಜಿ ಆಯುರ್ವೇದದ ಶಾಲ್ಯ ಮತ್ತು ಶಾಲ್ಯಕ ಓದಿದವರು ಮಾಡಬಹುದಾದ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಅನುಮತಿ ನೀಡುವ ಕೇಂದ್ರೀಯ ಭಾರತೀಯ ಔಷಧ ಪರಿಷತ್ ವಿರುದ್ಧ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಇಂದು ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ವೈದ್ಯರು ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುತ್ತಿದ್ದಾರೆ. ನಾಳೆ ಜೆ.ಕೆ.ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಶುಕ್ರವಾರ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇಚೆಗಳನ್ನು ಬಂದ್ ಮಾಡಲಾಗುತ್ತದೆ ಎಂದರು.
ಈ ಮಿಶ್ರ ವೈದ್ಯಕೀಯ ಪದ್ಧತಿ ಖಂಡಿತಾ ಬೇಡ. ಎಲ್ಲಾ ವಿವಿಧ ವೈದ್ಯ ಪದ್ಧತಿಗಳ ಶುದ್ದಿಯೇ ಐಎಂಎ ಗುರಿಯಾಗಿದೆ. ಪ್ರತಿಯೊಂದು ಔಷಧ ಪದ್ಧತಿಯ ವೈದ್ಯರು ಬೇರೆ ಬೇರೆಯಾಗಿ ಗುರುತಿಸಲ್ಪಡಬೇಕು. ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯಬೇಕು. ಸಾರ್ವಜನಿಕರ ಹಿತಾಸಕ್ತಿ ಮತ್ತು ಇತರ ವೈದ್ಯಕೀಯ ವ್ಯವಸ್ಥೆಯ ಹಿತದೃಷ್ಟಿಯಿಂದ ಭಾರತ ಸರ್ಕಾರ ಆದೇಶವನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.