ETV Bharat / state

ತೃತಿಯ ಲಿಂಗಿಗಳಿಗೂ ಮತದಾರರ ಚೀಟಿ ವಿತರಣೆ : ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ

author img

By

Published : Mar 9, 2023, 10:37 PM IST

ಮೈಸೂರು ಜಿಲ್ಲೆಯಲ್ಲಿರುವ 500 ತೃತಿಯ ಲಿಂಗಿಗಳಿಗೂ ಮತದಾರರ ಚೀಟಿ ದೊರೆಯಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಕೆ ವಿ ರಾಜೇಂದ್ರ ಸಲಹೆ ನೀಡಿದರು.

meeting  third gender voters was held
ತೃತೀಯ ಲಿಂಗಿ ಮತದಾರರ ಸಭೆ ನಡೆಯಿತು.

ಮೈಸೂರು: ಹೆಣ್ಣು ಮತ್ತು ಗಂಡು ಅಲ್ಲದೇ ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಛಿಸುವವರಿಗೆ ಗುರುತಿನ ಚೀಟಿ ಒದಗಿಸಲಾಗುವುದು ಎಂದು ಡಿಸಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ ವಿ ರಾಜೇಂದ್ರ ಹೇಳಿದರು. ಜಿಲ್ಲಾ ಸ್ವೀಪ್ ಸಮಿತಿಯಿಂದ, ಜಿ ಪಂ ದೇವರಾಜ ಅರಸು ಸುಭಾಂಗಣದಲ್ಲಿ, ತೃತೀಯ ಲಿಂಗಿ ಮತದಾರರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ 500 ತೃತಿಯ ಲಿಂಗಿಗಳಿಗೂ ಮತದಾರರ ಚೀಟಿ ದೊರೆಯಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ತೃತೀಯ ಲಿಂಗಿಗಳಾಗಿದ್ದೂ ಗುರುತಿನ ಚೀಟಿಯಲ್ಲಿ ಗಂಡು ಅಥವಾ ಹೆಣ್ಣು ಎಂದಿದ್ದು ಅದನ್ನು ತಿದ್ದುಪಡಿ ಮಾಡಿಸಿಕೊಂಡು ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಚಿಸುವವರಿಗೆ ಜಿಲ್ಲಾಡಳಿತ ಗುರುತಿಸಿ ಗುರುತಿನ ಚೀಟಿ ನೀಡುವ ಅವಕಾಶವಿದೆ. ಈ ಕುರಿತು ಚುನಾವಣೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಥವಾ ಡೆವಲಪ್ಮೆಂಟ್ ಆಫೀಸರಿಗೆ ಮನವಿ ನೀಡಬಹುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಮ್ ಗಾಯತ್ರಿ ಅವರು ಮಾತನಾಡಿ, ನಿಮ್ಮ ಸಮುದಾಯದಲ್ಲಿ ಎಷ್ಟೇ ವಿಧಗಳಿದ್ದರೂ ಸರ್ಕಾರದಿಂದ ಸೌಲಭ್ಯ ಪಡೆಯುವಾಗ ಎಲ್ಲರೂ ಒಟ್ಟಾಗಿ ಬರಬೇಕು. ಮತದಾರರ ಚೀಟಿ ಪಡೆಯುವಲ್ಲಿ ಏನಾದರೂ ಸಮಸ್ಯೆಗಳಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಗುರುತಿನ ಚೀಟಿ ಪಡೆದುಕೊಳ್ಳಿ ಎಂದು ಸೂಚಿಸಿದರು.

ಈಗಾಗಲೇ ಮತದಾರರ ಪಟ್ಟಿಯಲ್ಲಿ 210 ತೃತೀಯ ಲಿಂಗಿಗಳು ನೋಂದಣಿಯಾಗಿದ್ದು ಉಳಿದವರೂ ಆದಷ್ಟು ಬೇಗ ಮತದಾರರ ಚೀಟಿಯನ್ನು ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತಾರಾದ ರೂಪ, ಜಿ ಪಂನ ಉಪ ಕಾರ್ಯದರ್ಶಿ ಕೃಷ್ಣಂ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ ಹರೀಶ್ ಅವರನ್ನು ಒಳಗೊಂಡಂತೆ ತೃತೀಯ ಲಿಂಗಿ ಸ್ವಯಂ ಸೇವಾ ಸಂಸ್ಥೆಗಳಾದ ಆಶೋದಯ ಆಶ್ರಯ ಹಾಗೂ ಸೆವೆನ್ ರೈನ್ಬೋನ ತೃತೀಯ ಲಿಂಗಿಗಳು ಉಪಸ್ಥಿತರಿದ್ದರು.

ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇ: ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಯನ್ನು ಮೈಸೂರು ಮತ್ತು ವಿಜಯಪುರದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಮೈಸೂರಿನ ತೃತೀಯ ಲಿಂಗಿ ಸವೆನ್ ರೈನ್ ಬೋ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಮಾಹಿತಿ ನೀಡಿದ್ದಾರೆ.

‘‘ನಾವು ಜನ ಗಣತಿ ಗಂಡು ಹೆಣ್ಣಿನ ಗಣತಿ, ಹುಲಿ ಗಣತಿ ಸೇರಿದಂತೆ ಹಲವು ಗಣತಿಗಳನ್ನ ಕೇಳಿದ್ದೇವೆ. ಅದೇ ರೀತಿ ನಮ್ಮ ಗಣತಿಯನ್ನು ನಡೆಸಿ. ನಮಗೂ ಸರ್ಕಾರದ ಸೌಲಭ್ಯ ಸೇರಿದಂತೆ ಒಂದು ಗುರುತಿನ ಚೀಟಿ ನೀಡಿ ಎಂದು ಕಳೆದ 16 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಈಗ ತೃತೀಯ ಲಿಂಗಿಗಳ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇದರ ಅಂಗವಾಗಿ ಮೊದಲ ಬಾರಿಗೆ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೃತೀಯ ಲಿಂಗಿಗಳ ಪ್ರಾಯೋಗಿಕ ಗಣತಿ ಕಾರ್ಯವನ್ನು ಮಾರ್ಚ್ 12 ಅಥವಾ 13ನೇ ತಾರೀಖಿನಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಕ್ಷೀಪ್ತವಾಗಿ ಮಾಹಿತಿ ನೀಡಲಿದ್ದಾರೆ ಎಂದರು.

ಇದನ್ನೂಓದಿ:ಸಲಿಂಗ ಪ್ರೇಮ: ಮನೆ ಬಿಟ್ಟು ಹೋಗಿ ಒಂದಾದ ಇಬ್ಬರು ಯುವತಿಯರು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.