ETV Bharat / state

ನರಭಕ್ಷಕ ಹುಲಿ ಕಾರ್ಯಾಚರಣೆಗೆ ಹೊರಟ ದಸರಾ ಆನೆಗಳು.. ಸತಾಯಿಸಿದ ಜಯಪ್ರಕಾಶ..

ಕಳೆದ 45 ದಿನಗಳಿಂದಲೂ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ದಸರಾ ಗಜಪಡೆಯಲ್ಲಿ ಇಂದು ಅಭಿಮನ್ಯು, ಜಯಪ್ರಕಾಶ, ಗೋಪಾಲಸ್ವಾಮಿ ಆನೆಗಳು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅರಮನೆಯ ಆವರಣದಿಂದ ತೆರಳಿದ್ದು, ಅದರಲ್ಲಿ ಜಯಪ್ರಕಾಶ ಆನೆ ಲಾರಿಯನ್ನು ಹತ್ತಲು 2 ಗಂಟೆಗೂ ಹೆಚ್ಚು ಕಾಲ ಸತಾಯಿಸಿತು.‌

author img

By

Published : Oct 9, 2019, 10:05 PM IST

ನರಭಕ್ಷಕ ಹುಲಿ ಕಾರ್ಯಾಚರಣೆಗೆ ಹೊರಟ ದಸರಾ ಆನೆಗಳು

ಮೈಸೂರು:ಕಳೆದ 45 ದಿನಗಳಿಂದಲೂ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ದಸರಾ ಗಜಪಡೆಯಲ್ಲಿ ಇಂದು ಅಭಿಮನ್ಯು, ಜಯಪ್ರಕಾಶ, ಗೋಪಾಲಸ್ವಾಮಿ ಆನೆಗಳು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅರಮನೆಯ ಆವರಣದಿಂದ ತೆರಳಿದ್ದು, ಅದರಲ್ಲಿ ಜಯಪ್ರಕಾಶ ಆನೆ ಲಾರಿಯನ್ನು ಹತ್ತಲು 2 ಗಂಟೆಗೂ ಹೆಚ್ಚು ಕಾಲ ಸತಾಯಿಸಿತು.‌

ಚಾಮರಾಜನಗರದ ಬಂಡೀಪುರ ಅರಣ್ಯ ವ್ಯಾಪ್ತಿಯ ನರ ಭಕ್ಷಕ ಹುಲಿ ಕಾರ್ಯಾಚರಣೆಗಾಗಿ 3 ದಸರಾ ಆನೆಗಳು ತುರ್ತಾಗಿ ಲಾರಿಯಲ್ಲಿ ಹೊರಟಿದ್ದು, ನಾಳೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಜಯಪ್ರಕಾಶ ಆನೆ, ಮೊದಲ ಬಾರಿಗೆ ಲಾರಿಯಲ್ಲಿ ಸಂಚಾರ ಮಾಡುತ್ತಿರುವುದಿಂದ ಈ ರೀತಿ ಸತಾಯಿಸುವುದು ಸಾಮಾನ್ಯ. ಆದ್ದರಿಂದ ಅಭಿಮನ್ಯುವಿನ ಸಹಾಯದಿಂದ ಈ ಆನೆಯನ್ನು ಲಾರಿಗೆ ಹತ್ತಿಸಲಾಯಿತು.

ನರಭಕ್ಷಕ ಹುಲಿ ಕಾರ್ಯಾಚರಣೆಗೆ ಹೊರಟ ದಸರಾ ಆನೆಗಳು..

ನಾಳೆ ಬೆಳಗ್ಗೆ ಉಳಿದ 10 ಆನೆಗಳು ತಮ್ಮ ತಮ್ಮ ಶಿಬಿರಗಳಿಗೆ ತೆರಳಲಿದ್ದು, ಪ್ರತಿಯೊಬ್ಬ ಮಾವುತರಿಗೂ ಹಾಗೂ ಕಾವಾಡಿಗರಿಗೆ 10 ಸಾವಿರ ರೂ.ಗೌರವ ಧನ ನೀಡಲಾಗಿದೆ. ಜೊತೆಗೆ ಈ ಬಾರಿ ದಸರಾದಲ್ಲಿ 3 ಆನೆಗಳು ಜನಜಂಗುಳಿಯಲ್ಲಿ ಗದ್ದಲ ಮಾಡಬಹುದು ಎಂಬ ಕಾರಣಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಅದನ್ನು ಬಿಟ್ಟರೆ ಜಂಬೂಸವಾರಿಯಲ್ಲಿ‌ ಭಾಗವಹಿಸಿರುವ ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಪಶುವೈದ್ಯ ಡಾ.ನಾಗರಾಜ್ ತಿಳಿಸಿದ್ದಾರೆ.

Intro:ಮೈಸೂರು: ಚಾಮರಾಜನಗರದ ಬಂಡೀಪುರ ಅರಣ್ಯ ವ್ಯಾಪ್ತಿಯ ನರ ಭಕ್ಷಕ ಹುಲಿ ಕಾರ್ಯಚರಣೆಗಾಗಿ ದಸರಾದ ೩ ಆನೆಗಳು ತುರ್ತಾಗಿ ಲಾರಿಯಲ್ಲಿ ಹೊರಟಿದ್ದು ನಾಳೆಯಿಂದ ಕಾರ್ಯಚರಣೆ ಆರಂಭವಾಗಲಿದೆ.

Body:ಕಳೆದ ೪೫ ದಿನಗಳಿಂದಲೂ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ದಸರಾ ಗಜಪಡೆಯಲ್ಲಿ ಇಂದು ಅಭಿಮನ್ಯು, ಜಯಪ್ರಕಾಶ, ಗೋಪಾಲಸ್ವಾಮಿ ಆನೆಗಳು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಇಂದು ಅರಮನೆಯ ಆವರಣದಿಂದ ತೆರಳಿದ್ದು ಅದರಲ್ಲಿ ಜಯಪ್ರಕಾಶ ಅನೆ ಲಾರಿಯನ್ನು ಹತ್ತಲು ೨ ಗಂಟೆಗೂ ಹೆಚ್ಚು ಕಾಲ ಸತಾಯಿಸಿತು.‌
ಇದು ಸಹಜವಾಗಿದ್ದು ಏಕೆಂದರೆ ಮೊದಲ ಬಾರಿಗರ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಜಯಪ್ರಕಾಶ ಅನೆ, ಮೊದಲ ಬಾರಿಗೆ ಲಾರಿಯಲ್ಲಿ ಸಂಚಾರ ಮಾಡುತ್ತಿರುವುದಿಂದ ಈ ರೀತಿ ಸತಾಯಿಸುವುದು ಸಾಮಾನ್ಯ ಆದ್ದರಿಂದ ಅಭಿಮನ್ಯು ಆನೆಯ ಸಹಾಯದಿಂದ ಈ ಅನೆಯನ್ನು ಲಾರಿಗೆ ಹತ್ತಿಸಲಾಯಿತು .
ನಾಳೆ ಬೆಳಿಗ್ಗೆ ಉಳಿದ ೧೦ ಅನೆಗಳು ತಮ್ಮ ತಮ್ಮ ಶಿಬಿರಗಳಿಗೆ ತೆರಳಿವೆ.‌ ಪ್ರತಿಯೊಬ್ಬ ಮಾವುತರಿಗು ಹಾಗು ಕಾವಾಡಿಗರಿಗೆ ೧೦ ಸಾವಿರ ರೂಪಾಯಿ ಗೌರವ ನೀಡಲಾಗಿದೆ.
ಜೊತೆಗೆ ಈ ಬಾರಿ ದಸರಾದಲ್ಲಿ ೩ ಆನೆಗಳು ಜನಜಂಗುಳಿಯಲ್ಲಿ ಗದ್ದಲ ಮಾಡಬಹುದು ಎಂಬ ಕಾರಣಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಅದನ್ನು ಬಿಟ್ಟರೆ ಬೇರೆ ಏನು ಇಲ್ಲ,‌ ಜಂಬೂಸವಾರಿಯಲ್ಲಿ‌ ಭಾಗವಹಿಸಿರುವ ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಪಶುವೈದ್ಯ ಡಾ.ನಾಗರಾಜ್ ತಿಳಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.