ಮೈಸೂರು : ಇಂದು ಹುಣ್ಣಿಮೆ ನಿಮಿತ್ತ ನಂಜನಗೂಡಿನ ಶ್ರೀ ನಂಜುಂಡೇಶ್ವರನ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿದೆ. ದೇವಸ್ಥಾನದ ಒಳಗೆ ಹೋಗಲಾರದೇ ಆಚೆಯೇ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ.
ಪ್ರತಿ ವರ್ಷ ಭಾದ್ರಪದ ಪೂರ್ಣಿಮೆ ಶುಕ್ಲ ಪಕ್ಷದಲ್ಲಿ ಬರುವುದರಿಂದ ಈ ಹುಣ್ಣಿಮೆ ದಿವಸ ದೇವರ ದರ್ಶನ ಪಡೆದರೆ ಸಂಪತ್ತು ಹೆಚ್ಚಳವಾಗಲಿದೆ ಎಂಬ ನಂಬಿಕೆಯಿಂದ ನಂಜುಂಡೇಶ್ವರನ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತಾದಿಗಳು ಹರಿದು ಬಂದಿದ್ದಾರೆ.
ಮುಡಿ ಕೊಡುವ ಸ್ಥಳ ಹಾಗೂ ಕಪಿಲಾ ನದಿಯ ಸ್ನಾನಘಟ್ಟವೂ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಕೊರೊನಾ 3ನೇ ಅಲೆ ಬಗ್ಗೆ ಸರ್ಕಾರ ಎಚ್ಚರಿಕೆ ನೀಡುತ್ತಿದ್ದರೂ ಸಹ ಭಕ್ತಾದಿಗಳು ಯಾವುದಕ್ಕೂ ಕ್ಯಾರೆ ಎನ್ನದೇ, ಎಲ್ಲಾ ಕೋವಿಡ್ ನಿಯಮ ಮೀರಿ ಇಲ್ಲಿ ನೆರೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಓದಿ: ತೈಲ, ಅಡುಗೆ ಅನಿಲ ಬೆಲೆ ಇಳಿಸದಿದ್ದರೆ ಜನಪರ ಹೋರಾಟ ತೀವ್ರ: ಡಿಕೆಶಿ