ಮೈಸೂರು: ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿ ಹೋಬಳಿಯ ಬಾಗಲಿಗ್ರಾಮದ ನಿವಾಸಿ ಶಂಕರ(26) ಬಂಧಿತ ಆರೋಪಿ. ಈತ ಮೂಗೂರು ಗ್ರಾಮದ ಬಸ್ ನಿಲ್ದಾಣದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಜಿಂಕೆ ಚರ್ಮ, ಮಾಂಸ, ತಲೆ, ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ತಿಳಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಶನಿವಾರ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಿಂಕೆ ಮಾಂಸ, ಚರ್ಮ, ಕೊಂಬು, ಕಾಲು ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಅರಣ್ಯ ಸಂಚಾರಿ ದಳದ ಪಿಎಸ್‌ಐ ರವಿಶಂಕರ್ ನೇತೃತ್ವದದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ಎಂ.ಬಿ.ರಮೇಶ್, ವೆಂಕಟಚಲಯ್ಯ, ರಘು, ನರಸಿಂಹಮೂರ್ತಿ, ಮಂಜುನಾಥ್, ಚಲುವರಾಜ್, ಪ್ರದೀಪ್ ಇದ್ದರು.