ಮೈಸೂರು: ಮೂರು ದಿನಗಳಿಂದ ಸಾವಿರ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಕಂಡು ಗಾಬರಿಯಾಗಿದ್ದ ಮೈಸೂರಿಗರು, ಇಂದು 1169 ಮಂದಿ ಡಿಸ್ಚಾರ್ಜ್ ಆಗಿರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ಇಂದು ಜಿಲ್ಲೆಯಲ್ಲಿ 373 ಮಂದಿಗೆ ಕೊರೊನಾ ಸೋಂಕು ದೃಢಪಟ್ಟರೆ, ಗುಣಮುಖರಾಗಿ 1,169 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ 13 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 184 ಸಂಪರ್ಕಿತರಿಂದ, 104 ಐಎಲ್ಐ, ಎಸ್ಎಆರ್ ಐ 16, ಇತರೆ 69 ಸೇರಿದಂತೆ 373 ಮಂದಿಗೆ ಕೊರೊನಾ ವಕ್ಕರಿಸಿದೆ.
ಮೈಸೂರಿನಲ್ಲಿ ಈವರೆಗೆ ಒಟ್ಟಾರೆ 38,611 ಕೊರೊನಾ ಪ್ರಕರಣಗಳ ಪೈಕಿ, 30,377 ಮಂದಿ ಡಿಸ್ಚಾರ್ಜ್ ಆಗಿದ್ದು, 7403 ಸಕ್ರಿಯ ಪ್ರಕರಣಗಳಿವೆ. 831 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.