ಮೈಸೂರು: ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಅವರ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದೆ.
ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಭಾನುವಾರ ಸಂಜೆ ಬಗಾದಿ ಗೌತಮ್, ಅವರ ತಂದೆ, ಐದು ವರ್ಷದ ಮಗ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಮೂವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ಶುಕ್ರವಾರದವರೆಗೂ ಕಠಿಣ ನಿಯಮ ಮುಂದುವರಿಕೆ: ಸಿಎಂ ಸಭೆಯ ಮಹತ್ವದ ನಿರ್ಧಾರಗಳಿವು..
ಕಳೆದ ಹಲವಾರು ದಿನಗಳಿಂದ ಮೈಸೂರಿನ ವಿವಿಧ ಆಸ್ಪತ್ರೆ, ತಾಲೂಕುಗಳಿಗೆ ಬಗಾದಿ ಗೌತಮ್ ಭೇಟಿ ನೀಡಿದ್ದರು. ಪತ್ನಿ ಮಂಡ್ಯ ಜಿಲ್ಲಾಧಿಕಾರಿ ಡಾ. ಅಶ್ವಥಿ ಅವರು ಹಲವು ದಿನಗಳಿಂದ ಮಂಡ್ಯದಲ್ಲೇ ಉಳಿದಿದ್ದರು. ಅವರಿಗೆ ಕೋವಿಡ್ ತಗುಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.