ETV Bharat / state

ಜಂಬೂ ಸವಾರಿ, ಅರಮನೆಯಲ್ಲಿ ವಿಜಯದಶಮಿ: 10ನೇ ದಿನದ ಕಾರ್ಯಕ್ರಮಗಳು ಹೀಗಿವೆ... - ಈಟಿವಿ ಭಾರತ ಕನ್ನಡ

ನವರಾತ್ರಿಯ ಹತ್ತನೇ ದಿನವಾದ ಇಂದು ಅರಮನೆಯಲ್ಲಿ ಸಾಂಪ್ರಾಯಿಕ ಪೂಜಾ ಕಾರ್ಯಕ್ರಮಗಳು ಹೀಗಿರಲಿವೆ..

dasara-last-day-vijayadashami-festivel-in-mysore
ನಾಳೆ ಅರಮನೆಯಲ್ಲಿ ವಿಜಯದಶಮಿ
author img

By

Published : Oct 4, 2022, 10:24 PM IST

Updated : Oct 5, 2022, 7:14 AM IST

ಮೈಸೂರು: ಶರನ್ನವರಾತ್ರಿಯ 10ನೇ ದಿನವಾದ ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ವಿಜಯದಶಮಿ ಆಚರಣೆ ನೆರವೇರಲಿದ್ದು, ಇದಕ್ಕಾಗಿ ಸಾಂಸ್ಕೃತಿಕ ನಗರ ಸಜ್ಜಾಗಿದೆ. ಬೆಳಗ್ಗೆ 9.45 ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆ ಅರಮನೆ ಬಾಗಿಲಿಗೆ ಬರುತ್ತದೆ. ಅಲ್ಲಿ ಅವುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ.

ಬೆಳಗ್ಗೆ 10.15 ಕ್ಕೆ ಕಲ್ಯಾಣ ಮಂಟಪದಲ್ಲಿ ಪೂಜೆ ಹಾಗೂ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯ ಯಾತ್ರೆಯನ್ನು ಮಾಡಿ ನಂತರ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಬನ್ನಿ ಮರಕ್ಕೆ ಶಮಿ ಪೂಜೆ ಸಲ್ಲಿಸುತ್ತಾರೆ. ವಿಜಯಯಾತ್ರೆ ಮುಗಿದ ನಂತರ ಅರಮನೆಗೆ ವಾಪಸ್ ಆಗಿ ಚಾಮುಂಡೇಶ್ವರಿ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ವಿಜಯದಶಮಿಗೆ ಸಾಂಪ್ರದಾಯಿಕವಾಗಿ ಕೊನೆಗೊಳ್ಳುತ್ತದೆ.

ಇದನ್ನೂ ಓದಿ : ಆಯುಧ ಪೂಜಾ ಹಿನ್ನೆಲೆ: ಗಜಪಡೆಗೆ ವಿಶೇಷ ಪೂಜೆ

ಜಂಬೂ ಸವಾರಿ: ಅಧಿದೇವತೆ ಚಾಮುಂಡೇಶ್ವರಿ ಮೂರ್ತಿ ಇರುವ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಜಂಬೂಸವಾರಿ ಮತ್ತು ನಾಡಿನ ಕಲೆ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತರಾಗಿದ್ದಾರೆ.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36-2.50ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಲಿದೆ. ಸಂಜೆ 5.07-ದ 5.18ರವರೆಗೆ ಶುಭ ಮೀನ ಲಗ್ನದಲ್ಲಿ ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ಕೊಡಲಿದ್ದಾರೆ.

ಪಂಜಿನ ಕವಾಯತು: ಸಂಜೆ 7.30ಕ್ಕೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಜರುಗಲಿದೆ. ಇದರೊಂದಿಗೆ ಸಂಭ್ರಮದ ನಾಡಹಬ್ಬಕ್ಕೆ ತೆರೆ ಬೀಳಲಿದೆ.

Last Updated : Oct 5, 2022, 7:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.