ETV Bharat / state

ಜಂಬೂಸವಾರಿ ಮೆರವಣಿಗೆಗೆ ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರುಗು: ವಿಡಿಯೋ - ಮೈಸೂರು ವೈದ್ಯಕೀಯ ಕಾಲೇಜು

ಮೈಸೂರು ಜಂಬೂಸವಾರಿ ಮೆರವಣಿಗೆಗೆ ದಸರಾ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳು ಮೆರುಗು ನೀಡಿದವು.

ಜಂಬೂಸವಾರಿ ಮೆರವಣಿಗೆಗೆ ಮೆರುಗು ನೀಡಿದ ದಸರಾ ಸ್ತಬ್ಧ ಚಿತ್ರಗಳು

author img

By ETV Bharat Karnataka Team

Published : Oct 24, 2023, 9:19 PM IST

ಆಕರ್ಷಕ ಜಂಬೂಸವಾರಿ ಮೆರವಣಿಗೆ

ಮೈಸೂರು: ಇಂದು ನಡೆದ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಯ ಸ್ತಬ್ಧಚಿತ್ರಗಳು, ದಸರಾ ಉಪಸಮಿತಿಯ ಸ್ತಬ್ಧಚಿತ್ರಗಳು ಹಾಗೂ ಸರ್ಕಾರದ 14 ಇಲಾಖೆಯ ವಿಶೇಷ ಸ್ತಬ್ಧಚಿತ್ರಗಳ ಜತೆಗೆ ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ 95 ವಿವಿಧ ಬಗೆಯ ಕಲಾತಂಡಗಳು ಕಂಡುಬಂದವು.

ಬಾಗಲಕೋಟೆಯ ಬಾದಾಮಿ ಚಾಲುಕ್ಯ ವಂಶಸ್ಥ ಹಾಗೂ ಬನಶಂಕರಿ ದೇವಿ, ಬಳ್ಳಾರಿಯ ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಸ್ಥಾನ, ಕಸೂತಿ ಮತ್ತು ನಾರಿಹಳ್ಳ ಅಣೆಕಟ್ಟು, ಬೆಳಗಾವಿಯ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣ ಸೌಧ, ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ, ಬೆಂಗಳೂರು ಗ್ರಾಮಾಂತರದ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರದ ಚಂದ್ರಯಾನ, ಬೀದರ್​ನ ಕೃಷ್ಣ ಮೃಗ ಸಂರಕ್ಷಣಾ ಧಾಮ ಅರಣ್ಯ ಪ್ರದೇಶ, ಚಾಮರಾಜನಗರದ ಜಾನಪದ ಭಕ್ತಿ ಬೀಡು, ಆನೆ, ಹುಲಿಗಳ ಸಂತೃಪ್ತಿ ಕಾಡು, ಚಿಕ್ಕಬಳ್ಳಾಪುರ ಜಿಲ್ಲೆಯ ಏಕತೆಯಲ್ಲಿ ಅನೇಕತೆ, ಚಿಕ್ಕಮಗಳೂರಿನ ಬೆಟ್ಟದಿಂದ ಬಟ್ಟಲಿಗೆ, ಚಿತ್ರದುರ್ಗದ ಗುರು ತಿಪ್ಪೇಸ್ವಾಮಿ ದೇವಸ್ಥಾನ, ದಕ್ಷಿಣ ಕನ್ನಡ ಪಿಲಿಕುಳ ಗುತ್ತಿನ ವಿವೇಕಾನಂದ ತಾರಾಲಯ, ಬೀಚ್ ಸರ್ಫಿಂಗ್, ಸಂತ ಸೇವಾಲಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ, ಧಾರವಾಡ ಜಿಲ್ಲೆಯ ಧಾರಾವಾಡ ಪೇಡ, ಧಾರಾವಾಡದ ಎಮ್ಮೆ ನಮ್ಮ ಹೆಮ್ಮೆ, ಗದಗ್ ಜಿಲ್ಲೆಯ ಸಬರಮತಿ ಆಶ್ರಮ, ಹಾಸನ ಜಿಲ್ಲೆಯ ಹಾಸನಾಂಬ ದೇವಾಲಯ-ಹಲ್ಮಿಡಿ ಶಾಸನ-ಈಶ್ವರ ದೇವಸ್ಥಾನ ಅರಸೀಕೆರೆ ಜೇನುಕಲ್ಲು ಸಿದ್ಧೇಶ್ವರ ದೇವಾಲಯ, ಹಾವೇರಿ ಜಿಲ್ಲೆಯ ಶಂಕನಾದ ಮೊಳಗಿಸುತ್ತಿರುವ ಶ್ರೀ ಕನಕದಾಸರು ಹಾಗೂ ಗದ್ದಿಗೆ ಕಾಗಿನೆಲೆ, ಕಲ್ಬುರ್ಗಿ ಜಿಲ್ಲೆಯ ರಾಜವಂಶಸ್ಥರ ಕೋಟೆ, ಚಿಂಚೋಳ ಅರಣ್ಯ ಪ್ರದೇಶ ವನ್ಯಜೀವಿ ಧಾಮ, ಕೊಡಗಿನ ಪ್ರೇಕ್ಷಣೀಯ ತಾಣಗಳು, ಕೋಲಾರದ ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಪನನ ಹಾಗೂ ಮರುಸ್ಥಾಪನೆ, ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಮತ್ತು ಕೈಮಗ್ಗ. ಮಂಡ್ಯದ ಸಾಂಪ್ರದಾಯಿಕ ಉದ್ಯಮ ಆಲೆಮನೆ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು, ರಾಯಚೂರಿನ ನವರಂಗ ದರ್ವಾಜ ಹಾಗೂ R.T.P.S, ರಾಮನಗರದ ಚನ್ನಪಟ್ಟಣದ ಗೊಂಬೆಗಳು ಮತ್ತು ಕಬ್ಬಾಳಮ್ಮ ದೇವಸ್ಥಾನ, ಶಿವಮೊಗ್ಗದ ಕುವೆಂಪು ಅವರ ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ, ತುಮಕೂರು ಮೂಡಲಪಾಯ ಯಕ್ಷಗಾನ, ತವರು, ಉಡುಪಿಯ ತ್ಯಾಜ್ಯ ಮುಕ್ತ ಮತ್ಸ್ಯಸ್ನೇಹಿ ಸಮುದ್ರ, ಉತ್ತರ ಕನ್ನಡದ ಶರಾವತಿ ಮಡಿಲಲ್ಲಿ ವನ್ಯಜೀವಿ–ಸಿಂಹ ಬಾಲದ ಸಿಂಗಳಿಕಗಳ ಸಂರಕ್ಷಣೆ ಅಭಿಯಾನ, ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯನಗರದ ವಿಠಲ ದೇವಾಲಯ, ಯಾದಗಿರಿ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಸ್ತಬ್ಧಚಿತ್ರಗಳು ನೆರೆದಿದ್ದ ಜನರನ್ನು ಸೆಳೆದವು.

ಸ್ತಬ್ಧಚಿತ್ರ ಉಪಸಮಿತಿಯ ವತಿಯಿಂದ ಅರಮನೆ ವಾದ್ಯಗೋಷ್ಠಿ ಮತ್ತು ಯುನೆಸ್ಕೋದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಸ್ಥಳಗಳಾದ ಹೊಯ್ಸಳ ದೇವಸ್ಥಾನ, ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳ ಮಾದರಿಯ ಸ್ತಬ್ಧ ಚಿತ್ರಗಳು ನೋಡುಗರನ್ನು ಆಕರ್ಷಿಸಿದವು.

ಇತರೆ ಇಲಾಖೆಗಳ ಸ್ತಬ್ಧಚಿತ್ರಗಳು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನದ ಪೀಠಿಕೆ ಮತ್ತು ಇಲಾಖೆ ಇತರ ಯೋಜನೆಗಳು, ವಾರ್ತಾ ಮತ್ತು ಪ್ರಸಾರ ಇಲಾಖೆಯ ವತಿಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾದರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೃಹ ಲಕ್ಷ್ಮಿ ಯೋಜನೆ ಮತ್ತು ಇತರ ಯೋಜನೆಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಶ್ರೀ ಮಹರ್ಷಿ ವಾಲ್ಮಿಕಿ ಪುತ್ಥಳಿ ಹಾಗೂ ಇಲಾಖೆ ಸಂಬಂಧಿಸಿದ ಇತರ ಯೋಜನೆಗಳು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಅನ್ನಭಾಗ್ಯ ಯೋಜನೆ, ಕರ್ನಾಟಕ ಪೊಲೀಸ್ ಇಲಾಖೆ ಶೌರ್ಯ-ನ್ಯಾಯ-ರಕ್ಷೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಗಾಂಗ ದಾನ, ಆಶಾಕಿರಣ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿಯಿಂದ ಕ್ಷೀರ ಭಾಗ್ಯ ಯೋಜನೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಗೃಹ ಜ್ಯೋತಿ, ಕೃಷಿ ಸೋಲಾರ್ ಸೆಟ್, ಗ್ರಾಹಕರ ಸಲಹಾ ಸಮಿತಿ, ಇವಿ ಚಾರ್ಜರ್ ಪಾಯಿಂಟ್. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಶತಮಾನೋತ್ಸವ ಸಂಭ್ರಮದ ಸ್ತಬ್ಧ ಚಿತ್ರ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಲಕ್ಕುಂಡಿ ಬ್ರಹ್ಮ ಜಿನಾಲಯ, ಕಾವೇರಿ ನೀರಾವರಿ ನಿಗಮದಿಂದ ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ದತಿ, ಮೈಸೂರು ವಾಕ್ ಶ್ರವಣ ಸಂಸ್ಥೆ ವತಿಯಿಂದ ವಾಕ್ ಶ್ರವಣ ದೋಷದಿಂದ ಉತ್ತಮ ಜೀವನದೆಡೆಗೆ ಆಯುಷ್ ನಾ ಕೊಡುಗೆ, ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದಿಂದ ಲಿಡ್ಕರ್ ಅಪ್ಪಟ ಚರ್ಮ ಉತ್ಪನ್ನಗಳ ಆಗರ ಮತ್ತು ಚರ್ಮ ಕುಶಲಕರ್ಮಿಗಳ ಅಭಿವೃದ್ಧಿ ಆಶಾಕಿರಣ ಸ್ತಬ್ಧ ಚಿತ್ರಗಳನ್ನು ವಿವಿಧ ಇಲಾಖೆಗಳ ವತಿಯಿಂದ ಮೆರವಣಿಗೆಯಲ್ಲಿ ಪ್ರದರ್ಶನಗೊಂಡವು.

ಇದನ್ನೂ ಓದಿ: ಅರಮನೆಯಲ್ಲಿ ರಾಜ ವಂಶಸ್ಥರಿಂದ ಸಾಂಪ್ರದಾಯಿಕ ವಿಜಯ ದಶಮಿ ಪೂಜೆ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.