ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ನಿರ್ವಹಿಸಿದ ಅಭಿಮನ್ಯು ಹಾಗೂ ಅರ್ಜುನ ನೇತೃತ್ವದ ಗಜಪಡೆಯನ್ನು ನಾಳೆ ಅರಮನೆಯಿಂದ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಬೀಳ್ಕೊಡುವ ಕಾರ್ಯಕ್ರಮ ನಡೆಯಲಿದೆ.
ಜಂಬೂಸವಾರಿ ಮೆರವಣಿಗೆಯ ನೇತೃತ್ವ ವಹಿಸಿದ್ದ ಹಿರಿಯಣ್ಣ ಅರ್ಜುನ ಹಾಗೂ ಜಂಬೂಸವಾರಿಯನ್ನು ಮೂರನೇ ಬಾರಿ ಯಶಸ್ವಿಯಾಗಿ ಮುಗಿಸಿದ ಅಭಿಮನ್ಯು ಸೇರಿದಂತೆ ಕಳೆದ 59 ದಿನಗಳಿಂದ ಗಜಪಯಣದ ಮೂಲಕ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ 14 ಗಜಪಡೆಗಳಿಗೂ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಲಾಗುತ್ತದೆ.
ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಭೀಮ, ಧನಂಜಯ, ಮಹೇಂದ್ರ, ಶ್ರೀರಾಮ, ಸುಗ್ರೀವ, ಪಾರ್ಥಸಾರಥಿ, ಕಾವೇರಿ, ಚೈತ್ರ, ಲಕ್ಷ್ಮಿ, ವಿಜಯ, ಗೋಪಿ ಆನೆಗಳು ಮತ್ತು ಹೋಗುವಾಗ 15 ಆನೆಗಳು ಅಂದರೆ ಲಕ್ಷ್ಮಿಗೆ ದತ್ತಾತ್ರೇಯ ಎಂಬ ಗಂಡು ಮರಿಗೆ ಜನ್ಮ ನೀಡಿದ್ದು ಅದನ್ನು ಸಹ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಗುವುದು ಎಂದು ಡಿಸಿಎಫ್ ಕರಿಕಾಳನ್ ಅವರು ತಿಳಿಸಿದ್ದಾರೆ.
ಓದಿ: ಮೈಸೂರು ದಸರಾ ದೀಪಾಲಂಕಾರ ವೀಕ್ಷಣೆಗೆ ಇನ್ನೂ 10 ದಿನಗಳ ಕಾಲ ಅವಕಾಶ: ಸಚಿವ ಎಸ್ಟಿ ಸೋಮಶೇಖರ್