ಮೈಸೂರು: ಕುಟುಂಬಸ್ಥರು ಹುಷಾರು ತಪ್ಪಿದರು ಜೇಬಲ್ಲಿ ನಯಾಪೈಸೆ ಇಲ್ಲವೆಂದು ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ.
ತಾಲೂಕಿನ ವಿವಿಧ ಹಳ್ಳಿಗಳಿಂದ ನಡೆದುಕೊಂಡು ನಂಜನಗೂಡು ಪಟ್ಟಣಕ್ಕೆ ಬರುವ ಕೂಲಿ ಹಾಗೂ ಕಟ್ಟಡ ಕಾರ್ಮಿಕರು ಲಾಕ್ಡೌನ್ ಪರಿಣಾಮದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳಗ್ಗೆ ಬಂದು ಸಂಜೆಯವರೆಗೂ ಕೂಲಿಗಾಗಿ ಕಾದು ಬಸವಳಿಯುತ್ತಿದ್ದಾರೆ.
ಓದಿ:ಕಾಂಗ್ರೆಸ್ ಶಾಸಕನ ಬಂಗಲೆಯಲ್ಲಿ ಮಹಿಳೆ ಆತ್ಮಹತ್ಯೆ!
ಕೂಲಿಗಾಗಿ ಬೇರೆಬೇರೆ ಭಾಗಗಳಿಗೆ ತೆರಳಲು ಬಸ್ ವ್ಯವಸ್ಥೆಯಿಲ್ಲ. ಕುಟುಂಬ ನಿರ್ವಹಣೆಗೆ ಹಣವಿಲ್ಲದೆ ಕಾರ್ಮಿಕರು ಪರದಾಡುವಂತಾಗಿದೆ. ಸರ್ಕಾರ ನಮ್ಮಂತವರ ಕಷ್ಟಗಳಿಗೆ ಸ್ಪಂದಿಸಲಿ ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.