ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಾಯು ಮಾಲಿನ್ಯ ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸೈಕಲ್ ಫಾರ್ ಚೇಂಜ್ ಎಂಬ ಕಾರ್ಯಕ್ರಮದಡಿ ವಿಶೇಷ ಸೈಕಲ್ ಟ್ರ್ಯಾಕ್ (ವಿಶೇಷ ಸೈಕಲ್ ಪಥ) ನಿರ್ಮಾಣವಾಗುತ್ತಿದೆ.
ಈ ಕಾರ್ಯಕ್ರಮದಡಿ ದೇಶದ 95 ನಗರಗಳ ಪೈಕಿ ಮೈಸೂರು ಸಹ ಒಂದು. ನಗರದ ಕುಕ್ಕರಹಳ್ಳಿ ರಸ್ತೆ, ವಿಶ್ವಮಾನವ ಡಬಲ್ ರಸ್ತೆ ಮತ್ತು ಮುಡಾ ರಸ್ತೆಗಳು ಸೇರಿದಂತೆ 10 ಕಿ.ಮೀ. ಸೈಕಲ್ ಪಥ ನಿರ್ಮಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಮಹಾನಗರ ಪಾಲಿಕೆ ಕೂಡ ಸಹಭಾಗಿತ್ವ ಹೊಂದಿದೆ. ದ್ವಿಪಥ ರಸ್ತೆಗಳಲ್ಲಿ 4-6 ತಿಂಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಹಿಂದೆ ಟ್ರಿನ್ ಟ್ರಿನ್ ಯೋಜನೆ ಜಾರಿಗೆ ತರಲಾಗಿತ್ತು ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.