ETV Bharat / state

Mysore crime: ಫೇಸ್​ಬುಕ್​ನಲ್ಲಿ ಇಂಥವರೂ ಇರ್ತಾರೆ ಜೋಕೆ.. ಕಾಲ್ ಗಲ್೯ ಆಮಿಷಕ್ಕೆ ಬಲಿಯಾಗಿ ₹ 14 ಲಕ್ಷ ಕಳೆದುಕೊಂಡ 'ಸ್ವಾಮಿ'!

author img

By

Published : Jun 18, 2023, 4:09 PM IST

ಫೇಸ್​ಬುಕ್​ನಲ್ಲಿ ಪರಿಚಯವಾದ ಯುವತಿಯೊಬ್ಬಳ ಆಮಿಷಕ್ಕೆ ಬಲಿಯಾದ ಯುವಕನೋರ್ವ 14 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

youth-lost-14-lakhs-in-lure-of-call-girl-in-mysore
ಫೇಸ್​ಬುಕ್​ನಲ್ಲಿ ಪರಿಚಯ : ಕಾಲ್ ಗಲ್೯ ಆಮಿಷಕ್ಕೆ ಬಲಿಯಾಗಿ 14 ಲಕ್ಷ ಕಳೆದುಕೊಂಡ ಯುವಕ

ಮೈಸೂರು : ಕಾಲ್​​ಗರ್ಲ್​ಗಳ ಆಮಿಷಕ್ಕೆ ಬಲಿಯಾಗಿ ಯುವಕನೋರ್ವ ಬರೋಬ್ಬರಿ 14.48 ಲಕ್ಷ ಕಳೆದುಕೊಂಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಸ್ವಾಮಿ(32) ಎಂಬುವರೇ ವಂಚನೆಗೊಳಗಾದ ಯುವಕ. ಫೇಸ್ ಬುಕ್ ನಲ್ಲಿ ಬಂದ ಸಂದೇಶಗಳನ್ನು ನಂಬಿದ ಸ್ವಾಮಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

ಸ್ವಾಮಿ ಅವರಿಗೆ ಫೇಸ್ ಬುಕ್​​ನಲ್ಲಿ ಪಲ್ಲವಿ ಎಂಬ ಹೆಸರಿನಲ್ಲಿ ಸಂದೇಶವೊಂದು ಬಂದಿದೆ. ಈ ಯುವತಿಯು ಸ್ವಾಮಿ ಅವರಿಗೆ ಕಾಲ್​ಗರ್ಲ್ ಸೇವೆ ಒದಗಿಸುವುದಾಗಿ ನಂಬಿಸಿದ್ದಾಳೆ. ಯುವತಿಯ ಚಾಟ್​​ಗಳು ಮತ್ತು ಆಡಿಯೋ ಸಂಭಾಷಣೆಯನ್ನು ನಂಬಿದ ಸ್ವಾಮಿ ಹಂತಹಂತವಾಗಿ ಗೂಗಲ್ ಪೇ ಮೂಲಕ ಯುವತಿಗೆ ಹಣ ಕಳುಹಿಸಿದ್ದಾರೆ.

2023ರ ಜನವರಿ‌ 1ರಿಂದ ಹಿಡಿದು ಮೇ‌ 25ರವರೆಗೆ ಹಂತಹಂತವಾಗಿ ಒಟ್ಟು 14,48,500 ರೂಪಾಯಿಯನ್ನು ಯುವತಿಗೆ ಖಾತೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಸ್ವಾಮಿ ಜೊತೆ ಪಲ್ಲವಿ, ಅಂಜಲಿ, ಸುಮಾ, ಸ್ನೇಹ ಎಂಬ ಹೆಸರಿನಲ್ಲಿ ಯುವತಿಯರು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಫೇಸ್ ಬುಕ್ ನಲ್ಲಿ ಕಾಲ್ ಗರ್ಲ್ ಆಮಿಷಕ್ಕೆ ಬಲಿಯಾದ ಸ್ವಾಮಿ ಅವರು 14.48 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆನ್ ಠಾಣೆಯಲ್ಲಿ ಸ್ವಾಮಿ ಪ್ರಕರಣ ದಾಖಲಿಸಿದ್ದಾರೆ.

ಸಿಸಿ ಕ್ಯಾಮರಾಗಳ ಬ್ಯಾಟರಿ ಹಾಗೂ ಯುಪಿಎಸ್ ಕಳ್ಳತನ : ಮೈಸೂರು ನಗರ ಪೊಲೀಸ್ ವಿಭಾಗದ ವತಿಯಿಂದ‌ ನಗರದ ರಿಂಗ್ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳ ಬ್ಯಾಟರಿ ಹಾಗೂ ಯುಪಿಎಸ್​ಗಳ​​ನ್ನು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ನಗರದ ರಿಂಗ್ ರಸ್ತೆಯ‌ ಪೊಲೀಸ್ ಬಡಾವಣೆ ಸಮೀಪದ ಹಾಗೂ ಚಿಕ್ಕಹಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳ ಬ್ಯಾಟರಿ ಮತ್ತು ಯುಪಿಎಸ್​ಗಳು ಕಳ್ಳತನವಾಗಿದೆ. ಹಾರೆಯಿಂದ ಮೀಟಿ ಬಾಕ್ಸ್ ತೆರೆದು ಯುಪಿಎಸ್ ಇನ್ವರ್ಟರ್ ಮತ್ತು ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಎರಡೂ ಜಾಗಗಳಲ್ಲಿ ಕೇವಲ ಅರ್ಧ ಗಂಟೆಗಳ ಅಂತರದಲ್ಲಿ ಕಳ್ಳತನ ಮಾಡಿದ್ದಾರೆ. ಚಾಲಾಕಿ ಕಳ್ಳರು ತಮ್ಮ ವಾಹನವನ್ನು ದೂರದಲ್ಲಿಯೇ ನಿಲ್ಲಿಸಿ, ಕ್ಯಾಮರಾ ದೃಷ್ಟಿ ತಮ್ಮ ಮೇಲೆ ಬೀಳದಂತೆ ಅಡ್ಡ ದಾರಿಯಲ್ಲಿ ಬಂದು ಕಳ್ಳತನ ಮಾಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ದುಬಾರಿ ಬೆಲೆಯ ಕ್ಯಾಮೆರಾಗಳನ್ನು ಇಲ್ಲಿ ಅಳವಡಿಸಲಾಗಿತ್ತು. ರಿಂಗ್ ರಸ್ತೆಯ ಬೀದಿ ದೀಪಗಳ ನಿರ್ವಹಣೆಯ ಹೊಣೆ ಹೊತ್ತಿರುವ ನಗರಪಾಲಿಕೆ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸೆಸ್ಕ್ ನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಸಂಬಂಧ ರಿಂಗ್ ರಸ್ತೆಯಲ್ಲಿ ಕಳೆದ ಒಂದು ತಿಂಗಳಿಂದ ಬೀದಿ ದೀಪಗಳನ್ನು ಹಾಕುತ್ತಿಲ್ಲ. ಇದರ ಲಾಭ ಪಡೆದ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಯುವಕನಿಗೆ ಚೂರಿ ಇರಿದ ನಾಲ್ವರ ಬಂಧನ - ಕಣ್ಣಿಗೆ ಖಾರದ ಪುಡಿ ಎರಚಿ ಸುಲಿಗೆ ಮಾಡಿದವರು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.