ETV Bharat / state

ಮೈಸೂರು: 10 ಸಾವಿರ ರೂಪಾಯಿ ಹಣಕ್ಕಾಗಿ ಭಿಕ್ಷುಕಿ ಕೊಲೆ - ಸಿಸಿಟಿವಿ ದೃಶ್ಯದ ಆಧಾರದಿಂದ ಆರೋಪಿ ಬಂಧನ

ಹಣ ಕಂಡರೆ ಹೆಣ ಬಾಯಿ ಬಿಡುವುದು ಎಂಬುದು ಗಾದೆ. ಇಲ್ಲೊಬ್ಬ ಕುಡುಕ ಕೇವಲ 10 ಸಾವಿರ ರೂಪಾಯಿಗಾಗಿ ಬಡಪಾಯಿ ಭಿಕ್ಷುಕಿಯನ್ನೇ ಹತ್ಯೆ ಮಾಡಿದ್ದಾನೆ.

A drunkard killed beggar woman
ಭಿಕ್ಷುಕಿಯನ್ನು ಕೊಂದ ಕುಡುಕ
author img

By

Published : Jun 22, 2023, 8:10 PM IST

ಮೈಸೂರು: ಭಿಕ್ಷುಕಿ ಬಳಿ ಇದ್ದ ಹತ್ತು ಸಾವಿರ ಹಣ ಕಿತ್ತುಕೊಳ್ಳಲು, ಆಕೆಯ ಮೈಮೇಲೆ ಕಲ್ಲು ಎತ್ತಿ ಹಾಕಿ ಕುಡುಕನೊಬ್ಬ ಕೊಲೆಗೈದಿರುವ ಘಟನೆ ಮೈಸೂರಿನ ನಂಜುಮಳಿಗೆಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ. ಆರೋಪಿ ರವಿ ಎಂಬಾತನನ್ನು ಪೊಲೀಸರು ಸಿಸಿಟಿವಿಯ ವಿಡಿಯೋ ಆಧಾರದ ಮೇಲೆ ಕೆಲವೇ ಘಂಟೆಗಳಲ್ಲಿ ಬಂಧಿಸಿದ್ದಾರೆ. ನಂಜುಮಳಿಗೆ ಸರ್ಕಲ್​ನ ಬಳಿ ಭಿಕ್ಷುಕಿ ಪ್ರತಿನಿತ್ಯ ಭಿಕ್ಷೆ ಬೇಡಿ ಜೀವನವ ನಡೆಸುತ್ತಿದ್ದಳು.

ಹತ್ಯೆಯಾದ ಮಹಿಳೆ ಮಂಗಳವಾರ ಭಿಕ್ಷೆ ಬೇಡುತ್ತಿರುವ ಸಂದರ್ಭದಲ್ಲಿ ಆಟೋದಿಂದ ಅಪಘಾತಕ್ಕೆ ಒಳಗಾಗಿದ್ದರು. ಆಟೋಚಾಲಕ ಆಕೆಗೆ 10 ಸಾವಿರ ರೂಪಾಯಿ ಹಣವನ್ನು ಪರಿಹಾರವಾಗಿ ನೀಡಿದ್ದರು. ಅದನ್ನು ನೋಡಿಕೊಂಡ ರವಿ ಎಂಬ ಕುಡುಕನೋರ್ವ ಆ ಹಣವನ್ನು ಕಿತ್ತುಕೊಳ್ಳಲು ಹೊಂಚುಹಾಕಿದ್ದಾನೆ. ಇಂದು ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಆರೋಪಿ, ಭಿಕ್ಷುಕಿ ಬಳಿ ಇದ್ದ ಹಣ ಕಿತ್ತುಕೊಂಡು ಆಕೆಯನ್ನು ಹತ್ಯೆಗೈದಿದ್ದಾನೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಮೀಪದ ಮಳಿಗೆಯೊಂದರ ಸಿಸಿಟಿವಿಯಲ್ಲಿ ಕೊಲೆ ದೃಶ್ಯ ದಾಖಲಾಗಿತ್ತು. ಈ ಆಧಾರದ ಮೇಲೆ ಆರೋಪಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಸ್ಥಳೀಯ ನಿವಾಸಿ ಬಸಪ್ಪ ಮಾತನಾಡಿ, ಮಹಿಳೆ ಹಲವಾರು ವರ್ಷಗಳಿಂದ ನಂಜುಮಳಿಗೆ ಸರ್ಕಲ್​ನಲ್ಲಿಯೇ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದರು. ರಾತ್ರಿ ವೇಳೆಯೂ ಇಲ್ಲೇ ಮಲಗುತ್ತಿದ್ದರು. ಮೊನ್ನೆ ಆಟೋದಿಂದ ಅಪಘಾತಕ್ಕೆ ಒಳಗಾಗಿದ್ದರು. ಆಟೋ ಚಾಲಕ ಈಕೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಿದ್ದರು. ಆ ಹಣವನ್ನು ಇದೇ ಏರಿಯಾದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ರವಿ ಎಂಬಾತ ‌ನೋಡಿದ್ದ.

ಭಿಕ್ಷುಕಿ ನಿನ್ನೆ ರಾತ್ರಿ ನಂಜುಮಳಿಗೆಯ ಬಿ ಓ ಆಫೀಸ್ ಬಳಿ ಮಲಗಿದ್ದರು. ಅದನ್ನು ನೋಡಿಕೊಂಡ ರವಿ ಬೆಳಗ್ಗಿನ ಜಾವ 3 ಗಂಟೆ ಸಮಯದಲ್ಲಿ ಆ ಭಿಕ್ಷುಕಿಯ ಬಳಿ ಇದ್ದ ಹಣ ಕಸಿಯಲು ಆಕೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇದರ ಬಗ್ಗೆ ಆತನನ್ನು ಕೇಳಿದಾಗ, ಆಕೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಳು. ಅದಕ್ಕೆ ನಾನು ಆಕೆಯನ್ನು ಕೊಂದೆ ಎಂದು ಹೇಳಿದ್ದಾನೆ. ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಗರದ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ‌.

ಇದನ್ನೂ ಓದಿ: Bengaluru crime: ಕುಡಿಯೋಕೆ ಹಣ ಕೊಡದಿದ್ದಕ್ಕೆ ಹಾಲೋಬ್ಲಾಕ್‌ ಕಲ್ಲಿನಿಂದ ಹೊಡೆದು ಯುವಕನ ಹತ್ಯೆಗೈದ ಸ್ನೇಹಿತರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.