ಮೈಸೂರು : ನಗರದ ಹೊರವಲಯದ ಮಂಡಕಳ್ಳಿಯಲ್ಲಿ ಇರುವ ಕೆಎಸ್‌ಒಯು ಆಡಿಟೋರಿಯಂನಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಸೇವೆಗೆ ಸಿದ್ಧವಾಗುತ್ತಿದೆ. ಇದರಲ್ಲಿರುವ ಸೌಲಭ್ಯಗಳ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿವೆ. ಈಗ ಇರುವ ಕೋವಿಡ್ ಆಸ್ಪತ್ರೆ ಪೂರ್ತಿಯಾಗಿದ್ದು, ಮುಂದೆ ಕೊರೊನಾ ಪಾಸಿಟಿವ್ ಆಗಿ ಬರುವವರಿಗೆ ನಗರದ ಹೊರವಲಯದ ಮಂಡಕಳ್ಳಿಯ ಸಮೀಪ ಇರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಆಡಿಟೋರಿಯಂ ಮತ್ತು ಅಕಾಡೆಮಿಕ್ ಭವನದಲ್ಲಿ ಇರುವ 55 ರೂಮ್ಗಳಲ್ಲಿ 600 ಬೆಡ್ಗಳ ಹೈಟೆಕ್ ಕೋವಿಡ್ ಕೇರ್ ಸೆಂಟರ್‌ನ ಸಿದ್ಧಗೊಳಿಸಲಾಗುತ್ತಿದೆ. ಇಲ್ಲಿ ಐಷಾರಾಮಿ ಹೋಟೆಲ್ ಮಾದರಿಯ ಸೌಲಭ್ಯ ಒದಗಿಸಲಾಗಿದೆ.
ಏನೆಲ್ಲಾ ಸೌಲಭ್ಯವಿದೆ? : ಈ ಕೋವಿಡ್ ಕೇರ್ ಸೆಂಟರ್ನಲ್ಲಿ 600 ಬೆಡ್ ವ್ಯವಸ್ಥೆ ಇದ್ದು, 55 ರೂಮ್ಗಳಿವೆ, ಪ್ರತಿ ರೂಮ್ಗೂ ಟಿವಿ, ಇಂಟರ್ನೆಟ್, ವೈಫೈ ಸೌಲಭ್ಯ, ಸ್ನಾನಕ್ಕೆ ಬಿಸಿ ನೀರು, ಫುಡ್ ವ್ಯವಸ್ಥೆ , ಡಾಕ್ಟರ್ ಮತ್ತು ನರ್ಸ್ಗಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ. 24 ಗಂಟೆಯೂ ಸಿಸಿ ಟಿವಿ ಕಣ್ಗಾವಲು ಈ ಕೋವಿಡ್ ಕೇರ್ ಸೆಂಟರ್ನಲ್ಲಿದೆ ಎಂದು ಕೇಂದ್ರಕ್ಕೆ ಭೇಟಿ ನೀಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾಹಿತಿ ನೀಡಿದರು.
ಇನ್ನು, ಈ ಕೇಂದ್ರದಲ್ಲಿ ಈ ಸೌಲಭ್ಯದ ಜೊತೆಗೆ ಚೆಸ್, ಕೇರಮ್, ಮೈಂಡ್ ಫ್ರೀ ಗೇಮ್ಗಳು, ಟೇಬಲ್ ಟಿವಿ ವ್ಯವಸ್ಥೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ವಿವರಿಸಿದ್ದಾರೆ.