ಮೈಸೂರು: ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದ ಹಣ್ಣಿನ ವ್ಯಾಪಾರಿಗೆ ಕೊರೊನಾ ದೃಢಪಟ್ಟಿದ್ದು ,ಇವರ ಸಂಪರ್ಕದಲ್ಲಿರುವ ಹಾಗೂ ಸಂಪರ್ಕಕ್ಕೆ ಬಂದಿರುವವರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಈತ ಎಲ್ಲೆಲ್ಲಿ ಹಣ್ಣಿನ ವ್ಯಾಪಾರಕ್ಕಾಗಿ ಹೋಗಿದ್ದಾನೆ ಎಂಬ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದು, ಇದರ ಅನುಸಾರ ಸಾರ್ವಜನಿಕರು ಎಚ್ಚೆತ್ತುಕೊಂಡು ಸ್ವಯಂ ಪರೀಕ್ಷೆಗೆ ಒಳಪಡಬೇಕು ಎಂದಿದ್ದಾರೆ.


ಇನ್ನು ದಟ್ಟಗಳ್ಳಿ ನಿವಾಸಿ ಹಾಗೂ ನಂಜನಗೂಡು ಆರ್ .ಪಿ.ರಸ್ತೆ ನಿವಾಸಿಗೂ ಕೊರೊನಾ ದೃಢಪಟ್ಟಿದ್ದು, ಇವರ ಸಂಪರ್ಕಿತರು ಕೂಡ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.