ETV Bharat / state

ಜುಬಿಲಂಟ್​  ಬಳಿಕ ಗಾರ್ಮೆಂಟ್ಸ್ ಕಾರ್ಖಾನೆ ನೌಕರರಿಗೆ ವಕ್ಕರಿಸಿದ ಕೊರೊನಾ

author img

By

Published : Jul 30, 2020, 12:10 PM IST

ಮೈಸೂರಿನ ತಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದ ಬಳಿಯಿರುವ ಶಾಹಿ ಗಾರ್ಮೆಂಟ್ಸ್​​ನ ಮಹಿಳಾ ಕಾರ್ಮಿಕರಿಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಗಾರ್ಮೆಂಟ್ಸ್ ಅನ್ನು ಸೀಲ್​​​ಡೌನ್ ಮಾಡಲು ತಾಲೂಕು ಆಡಳಿತ ಮುಂದಾಗಿದೆ.

villagers protest
ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಮೈಸೂರು: ಜುಬಿಲಂಟ್, ಜೆ‌‌.ಕೆ.ಟೈಯರ್ಸ್ ನಂತರ ಇಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, 3 ಸಾವಿರ ಕಾರ್ಮಿಕರಲ್ಲಿ ಮತ್ತು ತಿ.ನರಸೀಪುರ ತಾಲೂಕಿನ ಜನತೆಗೆ ಮತ್ತಷ್ಟು ಆತಂಕ ಎದುರಾಗಿದೆ.

ತಾಲೂಕಿನ ನಿಲಸೋಗೆ ಗ್ರಾಮದ ಬಳಿ ಇರುವ ಶಾಹಿ ಗಾರ್ಮೆಂಟ್ಸ್​​ನ ಮಹಿಳಾ ಕಾರ್ಮಿಕರಿಬ್ಬರಿಗೆ ಸೋಂಕು ದೃಢಪಟ್ಟಿದೆ. ಮೂಗೂರು ಗ್ರಾಮದ ಮಹಿಳೆಯೊಬ್ಬರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡ ಬೆನ್ನಲ್ಲೇ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಖಚಿತವಾಗಿದೆ. ಮಹಿಳೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಜನರನ್ನು ಹೋಮ್​​​ ಕ್ವಾರಂಟೈನ್ ಮಾಡಲಾಗಿದೆ.

ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಸೋಂಕಿತ ಮಹಿಳೆಯಿಂದ ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ‌. ಗಾರ್ಮೆಂಟ್ಸ್ ಸೀಲ್​​​ಡೌನ್ ಮಾಡಲು ತಾಲೂಕು ಆಡಳಿತ ಮುಂದಾಗಿದೆ. ಗಾರ್ಮೆಂಟ್ಸ್​​ನ ಬೇಜವಾಬ್ದಾರಿತನಕ್ಕೆ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.