ETV Bharat / state

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಆದಿವಾಸಿ ಸಮುದಾಯ

ಲಾಕ್​ಡೌನ್​ನಿಂದಾಗಿ ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ, ಈ ಹಿನ್ನೆಲೆಯಲ್ಲಿ ನಿತ್ಯ ಕೂಲಿ ಮಾಡಿ ತಿನ್ನುವ ಆದಿವಾಸಿ ಕುಟಂಬಗಳು ಒಂದು ಹೊತ್ತಿನ ಊಟವೂ ಇಲ್ಲದೇ ಪರದಾಡುವಂತಾಗಿದೆ.

corona effect
ಕೊರೊನಾ ಎಫೆಕ್ಟ್
author img

By

Published : Apr 1, 2020, 2:59 PM IST

ಮೈಸೂರು : ಲಾಕ್​ಡೌನ್​ನಿಂದಾಗಿ ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ, ಈ ಹಿನ್ನೆಲೆಯಲ್ಲಿ ನಿತ್ಯ ಕೂಲಿ ಮಾಡಿ ತಿನ್ನುವ ಆದಿವಾಸಿ ಕುಟಂಬಗಳು ಒಂದು ಹೊತ್ತಿನ ಊಟವೂ ಇಲ್ಲದೇ ಪರದಾಡುವಂತಾಗಿದೆ.

ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳೂ ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಇಡೀ ತಾಲೂಕಿನಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ, ಇದರಿಂದ ಹಳ್ಳಿ ಮತ್ತು ಪಟ್ಟಣದ ಸಂಪರ್ಕ ಇಲ್ಲದಾಗಿದೆ. ಮಾತ್ರವಲ್ಲ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಸಹ ನಿರ್ಬಂಧ ವಿಧಿಸಿದ್ದಾರೆ.

ತಾಲೂಕಿನ ಕೊತ್ತನಹಳ್ಳಿ, ಚಿಲಕಹಳ್ಳಿ, ನಾಗಣಪುರ, ಡೋರನಕಟ್ಟೆ ಮತ್ತು ವೆಂಕಟಗಿರಿ ಆದಿವಾಸಿ ಕಾಲೊನಿಗಳಲ್ಲಿ ಸುಮಾರು 2 ಸಾವಿರ ಆದಿವಾಸಿ ಕುಟುಂಬಗಳು ವಾಸವಾಗಿದ್ದು, ಇವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ, ತಮ್ಮ ಮಕ್ಕಳು ಊಟವಿಲ್ಲದೇ ಪರದಾಡುತ್ತಿದ್ದಾರೆ ಹಾಗಾಗಿ ಸಗತ್ಯ ವಸ್ತುಗಳನ್ನು ಪೂರೈಸಬೇಕೆಂಬುದು ಇಲ್ಲಿನ ಜನರ ಅಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.