ETV Bharat / state

ಮಾನ ಮರ್ಯಾದೆ ಇಲ್ಲದ 17 ಜನ ಬಿಜೆಪಿಗೆ ಹೋದರು; ಸಿದ್ದರಾಮಯ್ಯ - ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಬಿಜೆಪಿ ಸರ್ಕಾರದ ವಿರುದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದು, ಮುಂದೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ
Siddaramaiah
author img

By

Published : Jan 13, 2021, 4:58 PM IST

ಮೈಸೂರು: ಮುಂದೆ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರೋದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ನಗರದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವರುಣಾ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಗ್ರಾಮ ಜನಾಧಿಕಾರ ಸನ್ಮಾನ‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪ ಪಕ್ಷ ಮತ್ತೆ ಅಧಿಕಾರಕ್ಕೆ ಬರಲ್ಲ. ಅವರು ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿಲ್ಲ. ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿ ಆದವರು. ಮುಂದೆ ಅಧಿಕಾರಕ್ಕೆ ಬರೋದು ನಮ್ಮ ಪಕ್ಷವೇ ಎಂದರು.

17 ಶಾಸಕರಿಗೆ ಹಣ, ಅಧಿಕಾರ ಕೋಡುತ್ತೀವಿ ಅಂದಿದ್ದಕ್ಕೆ ಹೋದರು. ಅವರಿಗೆ ಮಾನ ಮರ್ಯಾದೆ ಇಲ್ಲ. ಅದಕ್ಕೆ ಅವರು ಬಿಜೆಪಿಗೆ ಹೋದರು. ನೀವು ಹಾಗೆಲ್ಲ ಮಾಡಬೇಡಿ. ನಿಮಗೆ ಮಾನ ಮರ್ಯಾದೆ ಇದೆ ಪಕ್ಷ ಬಿಟ್ಟು ಹೋಗಬೇಡಿ, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭರವಸೆ ನೀಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ :

ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. 100 ಕ್ಕೆ 70ರಷ್ಟು ಕಾಂಗ್ರೆಸ್ ಬೆಂಬಲಿಗರು ಗೆದ್ದಿದ್ದಾರೆ. ಹಾಗಾಗಿ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಮೈಸೂರು‌ ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದನೇ ಸ್ಥಾನದಲ್ಲಿದ್ದು, ಜೆಡಿಎಸ್ ಎರಡನೇ ಸ್ಥಾನದಲ್ಲಿದೆ. ಬಿಜೆಪಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ ಒಂದನೇ ಸ್ಥಾನದಲ್ಲಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಇದನ್ನೇ ಆಧಾರವಾಗಿಟ್ಟುಕೊಂಡರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಹೆಚ್​ಡಿಕೆಗೆ ಟಾಂಗ್​:

ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಹಾಗೂ ಜೆಡಿಎಸ್ ಶಾಸಕರನ್ನು ಕೊಂಡುಕೊಂಡು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. 17 ಮಂದಿ ಪೈಕಿ 14 ಮಂದಿ ಕಾಂಗ್ರೆಸ್ ಶಾಸಕರು, 3 ಮಂದಿ ಜೆಡಿಎಸ್ ಶಾಸಕರು ಬಿಜೆಪಿಗೆ ಹೋದರು. ಆದರೂ ಕೂಡ ಹೆಚ್​​ಡಿ ಕುಮಾರಸ್ವಾಮಿ ಮಾತ್ರ ಸಿದ್ದರಾಮಯ್ಯ ಆಪ್ತರು ಬಿಜೆಪಿಗೆ ಹೋಗಿದ್ದಾರೆ ಅಂತಾರೆ, ಹಾಗಾದರೆ ಜೆಡಿಎಸ್​ನಿಂದ ಬಿಜೆಪಿಗೆ ಹೋದ ಮೂವರು ಶಾಸಕರು ನಿಮಗೇನಾಗಿದ್ದರು? ಅವ್ರೇನು ನಿಮ್ಮ ವೈರಿಗಳಾ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಮಹಿಳೆಯರಿಗೆ ಮೀಸಲಾತಿ ತಂದಿದ್ದು ಕಾಂಗ್ರೆಸ್​ :

ನಾನು ಹಣಕಾಸು ಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಮೀಸಲಾತಿ ತಂದಿದ್ದೆ, ಈ ಬಗ್ಗೆ ಬಿಜೆಪಿ ಇಲ್ಲ ಎಂದು ಹೇಳಲಿ ನೋಡೋಣ, ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮೀಸಲಾತಿ ತಂದಿದ್ದೇವೆ. ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಿದ್ದರು. ಮೀಸಲಾತಿ ವಿರೋಧ ಮಾಡಿದವರು ಬಿಜೆಪಿಯವರು. ಇಂತಹವರಿಗೆ ಪಂಚಾಯಿತಿ ಸದಸ್ಯರು ಬೆಂಬಲ ಕೊಡುತ್ತೀರಾ‌ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಮೀಸಲಾತಿ ವಿರೋಧಿಗಳು. ನಾನು ಸುಳ್ಳು ಹೇಳ್ತಿಲ್ಲ, ಬೇಕಿದ್ರೆ ಎಲ್ಲಾ ಹಿರಿಯ ನಾಯಕರನ್ನು ಕೇಳಿ. ಬಿಜೆಪಿಯವರು ಯಾವತ್ತೂ ಮೀಸಲಾತಿ ಪರ ಇಲ್ಲ, ಅಂಥವರಿಗೆ ಮಣೆ ಹಾಕಬೇಡಿ. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಶೇ 24.1ರಷ್ಟು ಮೀಸಲಾತಿ ನೀಡಿ ಕಾನೂನು ಮಾಡಿ ಜಾರಿಗೆ ತಂದಿದ್ದು ನಾನು, ಇದನ್ನು ಗ್ರಾಪಂ ಸದಸ್ಯರು ಜನರ ಬಳಿ ಹೇಳಬೇಕು. ಇಡೀ ದೇಶದಲ್ಲಿ ಮೀಸಲಾತಿ ಬಗ್ಗೆ ಕಟ್ಟುನಿಟ್ಟಿನ ಕಾನೂನು ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಹೊಡೆದು ಹಾಕಿತು. ಅದಕ್ಕೆ ಪರ್ಯಾಯವಾಗಿ ಕಾನೂನು ಮಾಡಿ ಜಾರಿಗೆ ತಂದಿದ್ದು ನಾನು ಎಂದು ಹೇಳಿದರು.

ಬಿಜೆಪಿಯವರು ಹಿಂದುಳಿದವರ, ಮಹಿಳೆಯರ ಅಜೆಂಡಾ ವಿರೋಧಿಗಳು. ನಾನು 7 ಕೆಜಿ ಅಕ್ಕಿ ಕೊಟ್ಟೆ, ಈಗ 5 ಕೆಜಿಗೆ ಇಳಿಸಿದ್ದಿರಾ. ಯಾರ ನಿಮ್ಮ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ರಾ, ನಾನು ನನ್ನ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ನಾ, ಇಲ್ಲ ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತಾ ಇದ್ದೆವು ಅಷ್ಟೇ. ಆದರೆ ನೀವ್ಯಾಕೆ ಯೋಜನೆಗೆಳನ್ನು ಕಡಿತ ಮಾಡಿದ್ದು ಮಿಸ್ಟರ್ ಯಡಿಯೂರಪ್ಪ ಎಂದು ಪ್ರಶ್ನಿಸಿದರು.

ಕೊರೊನಾ ಓಡಿಸಿ ಅಂದ್ರೆ ಗಂಟೆ ಬಡೀರಿ, ದೀಪ ಹಚ್ಚಿ ಅಂತಾರೆ. ಉದೋಗ ಕೇಳಿದರೆ ಪಕೋಡ ಮಾಡಿ ಅಂತಾರೆ, ಇವರನ್ನು ಪ್ರಧಾನಿ ಮಾಡಿದ್ದು ಪಕೋಡ ಮಾರೋಕಾ. ಉದ್ಯೋಗ ಸೃಷ್ಟಿ ಮಾಡೋದಿರಲಿ, ಇರೋ ಉದ್ಯೋಗಗಳು ಕಿತ್ತುಕೊಂಡು ಹೋಗಿವೆ ಎಂದು ಲೇವಡಿ ಮಾಡಿದರು.

48 ದಿನದಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಚಳಿಯಲ್ಲಿ ರಸ್ತೆಯಲ್ಲಿ ಕೂತಿದ್ದಾರೆ. ಆದರೆ ಪ್ರಧಾನಿ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ. ಕೋರ್ಟ್ ಛೀಮಾರಿ ಹಾಕಿದ್ರೂ ಬುದ್ದಿ ಕಲೀಲಿಲ್ಲ. ಆದರೆ ಸುಪ್ರೀಂ ಸಮಿತಿ ರಚನೆ ಮಾಡೋದಾಗಿ ಹೇಳಿದರೂ ರೈತರು ಒಪ್ಪಿಕೊಂಡಿಲ್ಲ. ಸಿದ್ದರಾಮಯ್ಯ ಗೋ ಹತ್ಯೆ ಕಾಯ್ದೆಗೆ ವಿರೋಧ ಅಂತಾರೆ. ಆದರೆ ನಾನು ರೈತರ ಹಿತ ಕಾಯೋ ಬಗ್ಗೆ ಯೋಚನೆ ಮಾಡುತ್ತೀನಿ. ವಯಸ್ಸಾದ ಹಸುಗಳನ್ನು ಸಾಕಲು ರೈತರು ಏನು ಮಾಡಬೇಕು. ಸಚಿವ ಆರ್. ಅಶೋಕ ನಮ್ಮ ಮನೆಗೆ ತಂದು ಬಿಡಿ ಎಂದಿದ್ದಾನೆ. ಅದಕ್ಕೆ ನಾನ್ ಹೇಳಿದ್ದೀನಿ ದುಡ್ಡು ಕೊಟ್ಟು ತೆಗೆದುಕೊಂಡು ಹೋಗು‌ ಎಂದು ಛೇಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.