ETV Bharat / state

ಸಜ್ಜನ ಶೆಟ್ಟರ್ ದುರ್ಜನ ಸಂಘ ಸೇರುತ್ತಿರುವುದು ದುರ್ದೈವ: ಸಿಎಂ ಬೊಮ್ಮಾಯಿ - ಜಗದೀಶ್​ ಶೆಟ್ಟರ್​ ಇಂದು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆ

ಬಿಜೆಪಿಯಿಂದ ಹೊರನಡೆದಿರುವ ಜಗದೀಶ್​ ಶೆಟ್ಟರ್​ ಇಂದು ಕಾಂಗ್ರೆಸ್​ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸಲು ಬಿ ಫಾರಂ ಪಡೆದರು.

CM basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Apr 17, 2023, 2:50 PM IST

Updated : Apr 17, 2023, 4:58 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು: ಬಸವಣ್ಣ ದುರ್ಜನರ ಸಂಘ ಮಾಡಬೇಡಿ ಎಂದು ಹೇಳಿದ್ದಾರೆ. ಆದರೆ ಜಗದೀಶ್ ಶೆಟ್ಟರ್ ಒಬ್ಬ ಸಜ್ಜನ ವ್ಯಕ್ತಿಯಾಗಿದ್ದು, ದುರ್ಜನರ ಸಂಘ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಹೇಳಿದರು. ಇಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಗಳು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ 130 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಮೆಜಾರಿಟಿ ಸರ್ಕಾರ ಬರಲಿದೆ. ನಮಗೆ ಪಕ್ಷದ ತಳ ಮಟ್ಟದ ಕಾರ್ಯಕರ್ತರ ದೊಡ್ಡ ಪಡೆ ಇದೆ. ಯಾವುದೋ ಕೆಲವು ನಾಯಕರು ಬೇರೆ ಪಕ್ಷಕ್ಕೆ ಹೋದರೆ ನಮ್ಮ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಪಕ್ಷ ಕಾರ್ಯಕರ್ತರ ಮೇಲೆ ನಿಂತಿದೆ. ಶೆಟ್ಟರ್ ಬೇರೆ ಪಕ್ಷಕ್ಕೆ ಹೋಗಿರುವುದರಿಂದ ನಮ್ಮ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಅವರಿಗೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಎಲ್ಲ ಗೌರವಗಳನ್ನೂ ನೀಡಿದರೂ ಯಾಕೆ ಪಕ್ಷ ಬಿಟ್ಟು ಹೋದರು ಎಂಬುದು ಅರ್ಥವಾಗುತ್ತಿಲ್ಲ.

ಕಾಂಗ್ರೆಸ್ 150 ಸ್ಥಾನಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ ಸ್ಥಾನಗಳಿಗೆ ಅವರ ಬಳಿ ಅಭ್ಯರ್ಥಿಗಳಿಲ್ಲ. ಈಗ ಅವರು ಅಭ್ಯರ್ಥಿಗಳನ್ನು ಬೇರೆಡೆಯಿಂದ ಪಕ್ಷಾಂತರ ಮಾಡಿಸುತ್ತಿದ್ದಾರೆ. ಇದರಲ್ಲಿ ಅವರು ಸಕ್ಸಸ್ ಆಗುವುದಿಲ್ಲ. ಬಿಜೆಪಿ ಬಲಿಷ್ಠವಾಗಿದೆ ಎಂದು ಸಿಎಂ ತಿಳಿಸಿದರು.

ವರುಣದಲ್ಲಿ ಅಚ್ಚರಿ ಫಲಿತಾಂಶ ಬರಲಿದೆ: ವರುಣ ನಮ್ಮ ಪರವಾಗಿದೆ. ಇಲ್ಲಿ ಸ್ಪರ್ಧೆ ಜಿದ್ದಾಜಿದ್ದಿನಿಂದ ಕೂಡಿರಲಿದ್ದು, ರಾಜಕೀಯ ಹಾಗೂ ಸಾಮಾಜಿಕ ಸಮೀಕರಣದ ಅಂಶಗಳಲ್ಲಿ ಹೇಳುವುದಾದರೆ ಬಹಳ ಆಶ್ಚರ್ಯಕರ ಫಲಿತಾಂಶ ಬರಲಿದೆ. ಸೋಮಣ್ಣನಂತಹ ನಾಯಕರನ್ನು ಅದಕ್ಕೆ ವರುಣದಿಂದ ಸ್ಪರ್ಧೆಗೆ ಹಾಕಿರುವುದು ಇದೇ ಕಾರಣಕ್ಕೆ. ಎಲ್ಲವನ್ನೂ ಸೀರಿಯಸ್ ಆಗಿ ತೆಗೆದುಕೊಂಡು ಪ್ಲಾನ್ ಮಾಡಲಾಗಿದೆ. ವರುಣ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಬರುವ ಸಾಧ್ಯತೆ ಇದ್ದು, ನಾಮಪತ್ರ ಸಲ್ಲಿಕೆಯಾದ ನಂತರ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.

ನಾನು ಸ್ಪರ್ಧಿಸುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ತಲೆಕೆಡಿಸಿಕೊಂಡಿಲ್ಲ. ನಾನು ಶನಿವಾರ ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದ ಜನರ ಬಗ್ಗೆ ನಂಬಿಕೆ ಇದೆ. ನನಗೆ ಹಾಗೂ ಪಕ್ಷಕ್ಕೆ ಜನ ಬೆಂಬಲ ಇದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ನವರು ಜಗದೀಶ್​ ಶೆಟ್ಟರ್​ಗೆ ಸಿಎಂ ಇಲ್ಲ, ಪಿಎಂ ಮಾಡ್ತೀನಿ ಅಂದಿರಬಹುದು; ಬಿ ಸಿ ಪಾಟೀಲ್​

Last Updated : Apr 17, 2023, 4:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.