ಮೈಸೂರು: ಸಾಮಾಜಿಕ ಜಾಲತಾಣಗಳು ಕೇವಲ ಟೈಮ್ಪಾಸ್ ಮಾಡಲು ಮಾತ್ರವಲ್ಲ, ಸಮಾಜದಲ್ಲಿನ ಪಿಡುಗುಗಳನ್ನು ಹೊಗಲಾಡಿಸಲು ಸಹ ಬಳಸಲಾಗುತ್ತದೆ ಎಂಬುದನ್ನು ಮೈಸೂರಿನ ಯುವಕರು ಸಾಬೀತು ಮಾಡಿದ್ದಾರೆ.
ಹೌದು, ಜಿಲ್ಲೆಯ ಜಯಪುರ ಹೋಬಳಿಯ ಗ್ರಾಮಯೊಂದರಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ಬಲವಂತವಾಗಿ ಮಾಡಲು ಹೊರಟ್ಟಿದ್ದ ಬಾಲ್ಯ ವಿವಾಹವನ್ನು, ತನ್ನ ಸ್ನೇಹಿತರಿಗೆ ತಿಳಿಸಿದ್ದಳು, ಅದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಪರಿಣಾಮ, ಇಂದು ಅಪ್ರಾಪ್ತೆ ಬಾಲಕಿಯನ್ನು ವಿವಾಹ ಮಾಡಲು ಪ್ರಯತ್ನಿಸುತ್ತಿದ್ದ ಕುಟುಂಬದವರಿಗೆ ತಿಳಿವಳಿಕೆ ನೀಡುವ ಮೂಲಕ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಯಲಾಯಿತು.
ಫೇಸ್ಬುಕ್ನಲ್ಲಿ ಪೋಸ್ಟ್ ನೋಡಿದ ಜಯಪುರ ಪೊಲೀಸರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಬಾಲ್ಯವಿವಾಹದ ಕುರಿತು ಕಾನೂನು ಅರಿವು ಮೂಡಿಸಿ, ಯುವತಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ಬುದ್ದಿಮಾತು ಹೇಳಿದ್ದಾರೆ.