ಮೈಸೂರು: ನಂಜನಗೂಡು ತಾಲೂಕಿನಲ್ಲಿ ದಿನೇ-ದಿನೆ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ. ಅನ್ನದಾತರು ಜಾನುವಾರಗಳನ್ನು ಕಳೆದುಕೊಂಡು ಹತಾಶರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ಗೋಪಾಲಯ್ಯ ಎಂಬವರಿಗೆ ಸೇರಿದ ಎತ್ತು, ಕಂದೇಗಾಲ ಗ್ರಾಮದ ಹೊರವಲಯದ ಕುಂಟೇರಿ ಬೈಲ್ನಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಚಿರತೆಯು ಅದನ್ನು ಬರ್ಬರವಾಗಿ ಕೊಂದು ಹಾಕಿದೆ. ಕೆಲ ತಿಂಗಳುಗಳಿಂದ ನಿರಂತರವಾಗಿ ಸಾಕು ಪ್ರಾಣಿಗಳನ್ನ ಚಿರತೆ ಬಲಿ ಪಡೆಯುತ್ತಿದೆ. ಹಾಗಾಗಿ ನಂಜನಗೂಡು ಅರಣ್ಯ ಇಲಾಖಾಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಟಾಯ್ಲೆಟ್ನೊಳಗೆ ಬಂದಿಯಾದ ಚಿರತೆ ಮತ್ತು ನಾಯಿ..!
ಮೂರು ದಿನಗಳ ಹಿಂದೆ ಕೋಣನೂರು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅಲ್ಲದೇ ಮಲ್ಕುಂಡಿ ಗ್ರಾಮದಲ್ಲಿ ವಾರದ ಹಿಂದೆ ಚಿರತೆ ಜಾನುವಾರುವನ್ನು ಬಲಿ ಪಡೆದಿತ್ತು.