ಮೈಸೂರು: ಒಂಟಿಯಾಗಿ ವಾಕ್ ಮಾಡುತ್ತಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನು ಹತ್ತಿ ಹಿಡಿದಿದ್ದಾರೆ. ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಬಗ್ಗೆ ಡಿಸಿಪಿ ಪ್ರಕಾಶ್ ಗೌಡ ವಿವರಣೆ:
ವಿಜಯನಗರ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣಗಳು ವರದಿಯಾಗಿತ್ತು. ನಮ್ಮ ಸಿಬ್ಬಂದಿ ಮತ್ತು ಅಧಿಕಾರಿಗಳು ಆರೋಪಿಗಳನ್ನು ಸುತ್ತುವರೆದು ಪತ್ತೆ ಮಾಡಬೇಕಾದರೆ ಎದುರುಗಡೆ ಒಬ್ಬ ವ್ಯಕ್ತಿಯೊಬ್ಬ ಸಿಗುತ್ತಾನೆ. ಆತನನ್ನು ಹಿಂಬಾಲಿಸುತ್ತಾ ಬೈಕ್‌ಗೆ ಪೊಲೀಸ್ ವಾಹನದಿಂದ ಡಿಕ್ಕಿ ಹೊಡೆದು ಬೀಳಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದೀವಿ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮದ್ಯದ ಅಂಗಡಿ ತೆರೆದ ಮೇಲೆ ಈ ರೀತಿ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಹೆಚ್ಚಾಗಿವೆ ಅನ್ನಿಸುತ್ತಿದೆ. ಲಾಕ್ಡೌನ್ನಲ್ಲಿ ನಡೆದ ಬಹುತೇಕ ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಮದ್ಯಪಾನ ಮಾಡಿರುವುದು ಕಂಡುಬಂದಿದೆ ಎಂದು ತಿಳಿಸಿದರು.