ಮೈಸೂರು: ಲಾಡ್ಜ್‌ನ ಸ್ಪಾನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೋಲಿಸರು ನಾಲ್ವರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿರುವ ವಿ ವೆಲ್ಲಾ ಇನ್ ಲಾಡ್ಜ್ ಮಾಲೀಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಬ ಆಪಾದನೆ ಮೇಲೆ ಗುರುಸ್ವಾಮಿ (35), ವ್ಯವಸ್ಥಾಪಕ ವಿನೋದ್ (23), ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದ ನಿವಾಸಿ ಹರೀಶ (34) ಮತ್ತು ಆಲನಹಳ್ಳಿ ನಿವಾಸಿ ಮೋಹನ್ ಕುಮಾರ್ (31) ಬಂಧಿತ ಆರೋಪಿಗಳಾಗಿದ್ದಾರೆ. ಮಹಿಳೆಯರನ್ನು ಕರೆದುಕೊಂಡು ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸುತ್ತಿದ್ದ ಚಂದ್ರಶೇಖರ್ ತಲೆಮರೆಸಿಕೊಂಡಿದ್ದಾನೆ.
ರಿಂಗ್ ರಸ್ತೆಯಲ್ಲಿರುವ ವಿ ವೆಲ್ಲಾ ಇನ್ ಲಾಡ್ಜ್‌ನ 3ನೇ ಮಹಡಿಯಲ್ಲಿ ಪಿಂಕ್ ಫ್ಲವರ್ ಬ್ಯೂಟಿ ಕೇರ್ ಆ್ಯಂಡ್ ಸ್ಪಾ ಮೇಲೆ ದಾಳಿ ಮಾಡಲಾಗಿದೆ. ಮಸಾಜ್ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1,700 ರೂ. ನಗದು, 2 ಮೊಬೈಲ್, ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.