ಮೈಸೂರು: ಸಂಪುಟ ವಿಸ್ತರಣೆ ಮಾಡಿದರೆ, ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟ ಪರಮಾಧಿಕಾರವೆಂದು ಅರಣ್ಯ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂ ಪ್ರಶ್ನಾತೀತರು. ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮೂರು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಉಮೇಶ್ ಕತ್ತಿ ಸೇರಿದಂತೆ ಹೊಸಬರು ಕೂಡ ಸಚಿವ ಆಕಾಂಕ್ಷಿಗಳಿದ್ದಾರೆ ಎಂದರು.
ಮುಖ್ಯಮಂತ್ರಿ ಅವರ ಅಣತಿಯಂತೆ ಎಲ್ಲರೂ ಕೆಲಸ ಮಾಡುತ್ತೇವೆ ಎಂದು ಸಚಿವರು ಹೇಳಿದ್ರು. ಇನ್ನು ಡಿಸಿಎಂ ಹುದ್ದೆ ಅಪ್ರಸ್ತುತ ಎಂದು ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಕುರಿತು ಪ್ರತಿಕ್ರಿಯಿಸಲು ಸಿ ಸಿ ಪಾಟೀಲ್ ನಿರಾಕರಿಸಿದರು.