ETV Bharat / state

ರಿಲ್ಯಾಕ್ಸ್ ಮೂಡಿನಲ್ಲಿ ಅಭಿಮನ್ಯು ಅಂಡ್ ಟೀಮ್..

author img

By

Published : Oct 16, 2021, 9:29 PM IST

Updated : Oct 16, 2021, 10:36 PM IST

ಶುಕ್ರವಾರ ಜಂಬೂಸವಾರಿ ಯಶಸ್ವಿಗೊಳಿಸಿ ಶನಿವಾರ ಅರಮನೆ ಆವರಣದಲ್ಲಿ ಉಲ್ಲಾಸದಲ್ಲಿ ಗಜಪಡೆ ಅಂಡ್ ಟೀಂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದವು. ಮಾವುತರು ಹಾಗೂ ಕಾವಾಡಿಗಳು ತಮ್ಮ ಆನೆಗಳಿಗೆ ಸ್ನಾನ ಮಾಡಿಸಿ ಪ್ರೀತಿಯಿಂದ ಮೈ ಸವರಿ ಧನ್ಯವಾದ ಅರ್ಪಿಸಿದರು..

Captain abhimanyu and elephant team in relax mood
ರಿಲ್ಯಾಕ್ಸ್ ಮೂಡಿನಲ್ಲಿ ಅಭಿಮನ್ಯು ಅಂಡ್ ಟೀಮ್

ಮೈಸೂರು : ವಿಶ್ವವಿಖ್ಯಾತ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಕ್ಯಾಪ್ಟನ್ ಅಭಿಮನ್ಯು ಮತ್ತು ಗಜಪಡೆ ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದ್ದವು.

ರಿಲ್ಯಾಕ್ಸ್ ಮೂಡಿನಲ್ಲಿ ಅಭಿಮನ್ಯು ಅಂಡ್ ಟೀಮ್

ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಸೆ.13ರಂದು ಗಜಪಯಣ ಆರಂಭಿಸಿ ದಸರಾ ಮಹೋತ್ಸವಕ್ಕೆ ನಾಂದಿ ಹಾಡಿದ ಕ್ಯಾಪ್ಟನ್ ಅಭಿಮನ್ಯು, ಕಾವೇರಿ, ಚೈತ್ರ, ಅಶ್ವತ್ಥಾಮ, ಧನಂಜಯ, ಗೋಪಾಲಸ್ವಾಮಿ, ಲಕ್ಷ್ಮಿ, ವಿಕ್ರಮ ಆನೆಗಳು ಒಂದು ತಿಂಗಳ ಕಾಲ ಅರಮನೆ ಆವರಣದಲ್ಲಿ ತಾಲೀಮು ನಡೆಸಿದ್ದವು. ಶುಕ್ರವಾರ ನಡೆದ ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಗಾಂಭೀರ್ಯ ನಡೆಯ ಮೂಲಕ ದಸರಾವನ್ನು ಯಶಸ್ವಿಗೊಳಿಸಿದವು.

ಅಭಿಮನ್ಯು, ಕಾವೇರಿ, ಚೈತ್ರ, ಅಶ್ವತ್ಥಾಮ, ಧನಂಜಯ, ಗೋಪಾಲಸ್ವಾಮಿ ಈ ಆರು ಆನೆಗಳನ್ನು ಜಂಬೂಸವಾರಿಯಲ್ಲಿ ಬಳಸಿಕೊಳ್ಳಲಾಗಿತ್ತು. ಹೊಸದಾಗಿ ಬಂದಿದ್ದ ಲಕ್ಷ್ಮಿ ಹಾಗೂ ಮದವೇರಿದ್ದ ವಿಕ್ರಮನಿಗೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿಲ್ಲ. ಆದರೂ ಎಂಟು ಆನೆಗಳು ದಸರಾದಲ್ಲಿ ಪ್ರಮುಖ ಪಾತ್ರವಹಿಸಿದ್ದವು.

ಶುಕ್ರವಾರ ಜಂಬೂಸವಾರಿ ಯಶಸ್ವಿಗೊಳಿಸಿ ಶನಿವಾರ ಅರಮನೆ ಆವರಣದಲ್ಲಿ ಉಲ್ಲಾಸದಲ್ಲಿ ಗಜಪಡೆ ಅಂಡ್ ಟೀಂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದವು. ಮಾವುತರು ಹಾಗೂ ಕಾವಾಡಿಗಳು ತಮ್ಮ ಆನೆಗಳಿಗೆ ಸ್ನಾನ ಮಾಡಿಸಿ ಪ್ರೀತಿಯಿಂದ ಮೈ ಸವರಿ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: ಯಡಿಯೂರಪ್ಪ-ಸಿದ್ದರಾಮಯ್ಯ ಎಲ್ಲೆಲ್ಲೋ ಭೇಟಿ ಆಗಿರ್ತಾರೆ, ನಾನೇನ್ ಬ್ಯಾಟರಿ ಹಾಕ್ಕೊಂಡ್ ಹುಡುಕ್ಲಾ.. HDK

Last Updated : Oct 16, 2021, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.