ETV Bharat / state

ಹುಣಸೂರು ಉಪಚುನಾವಣೆ​: ಮೂರೂ ಪಕ್ಷಗಳಿಗೆ ಪ್ರತಿಷ್ಠೆ, ಯಾರಿಗೆ ವಿಜಯಮಾಲೆ?

ರಾಜ್ಯದ ಉಪಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಹುಣಸೂರು ಕ್ಷೇತ್ರವೂ ಒಂದು. ಇಲ್ಲಿನ ಪ್ರಚಾರಕ್ಕೆ ಎರಡು ರಾಷ್ಟ್ರೀಯ ಪಕ್ಷಗಳ ಹಾಗೂ ಪ್ರದೇಶಿಕ ಪಕ್ಷದ ಪ್ರಮುಖ ನಾಯಕರಿಗೆ ಪ್ರತಿಷ್ಠೆಯಾಗಿದೆ. ಇಲ್ಲಿ ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.

by-election campaign in hunasuru
ಹುಣಸೂರು ಉಪಚುನಾವಣೆ ಕ್ಷೇತ್ರ
author img

By

Published : Dec 8, 2019, 11:54 PM IST

ಮೈಸೂರು: ನವೆಂಬರ್​ 5 ರಂದು ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಬ್ಬರ, ಮೇಲೊಬ್ಬರು ಕಟುವಾಗಿ ಟೀಕಿಸುತ್ತ, ನಮ್ಮನ್ನೇ ಗೆಲ್ಲಿಸಿ ಎಂದು ಮತದಾರರ ವೋಲೈಕೆಗೆ ಹಲವು ತಂತ್ರಗಳನ್ನು ಪ್ರಯೋಗಿಸಿದ್ದರು.

ಚುನಾವಣೆ ಮತಯಾಚನೆ ವೇಳೆ, ಈ ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಹೆಚ್​ ವಿಶ್ವನಾಥ್​ ಅವರನ್ನು ಸುಪ್ರೀಂಕೋರ್ಟ್ ಅನರ್ಹ ಎಂದು ಹೇಳಿದೆ. ಇವರನ್ನು ಸೋಲಿಸಲು ಮತದಾರರು ಮುದ್ರೆ ಒತ್ತುವುದೊಂದೇ ಬಾಕಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಬ್ಬರಿಸಿದ್ದರು‌.

ಸಿಎಂ ಬಿ.ಎಸ್. ಯಡಿಯೂರಪ್ಪ, ಅವರು ವಿಶ್ವನಾಥ್ ಅವರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ. ಇವರನ್ನು ಗೆಲ್ಲಿಸಿ ಕಳುಹಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು.

ಇನ್ನು, ಜೆಡಿಎಸ್​ ಏನು ಕಡಿಮೆ ಇಲ್ಲ ಎಂಬಂತೆ, ರಾಜ್ಯದಲ್ಲಿ ಧ್ರುವೀಕರಣವಲ್ಲ‌, ಶುದ್ಧೀಕರಣವಾಗಬೇಕು. ಅನರ್ಹರಿಗೆ ತಕ್ಕ ಪಾಠ ಕಲಿಸಿ ಎಂದು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಗುಡುಗಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್, ಬಿಜೆಪಿಯ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಹಾಗೂ ಜೆಡಿಎಸ್​ನಿಂದ ಕಣಕ್ಕಿಳಿದಿರುವ ಸೋಮಶೇಖರ್ ಅವರಿಗೆ ಡಿ.9ರಂದು ಪ್ರಕಟಗೊಳ್ಳುವ ಫಲಿತಾಂಶ ಸ್ಪಷ್ಟ ಉತ್ತರ ನೀಡಲಿದೆ.

ಪುರುಷರು 1,14,580, ಮಹಿಳೆಯರು 1,13,388 ಇತರೆ 6 ಸೇರಿ ಒಟ್ಟು ಮತದಾರ ಸಂಖ್ಯೆ 2,27,974 ಪೈಕಿ ಶೇಕಡಾ 80.59ರಷ್ಟು ಮತದಾನವಾಗಿದೆ. ಒಟ್ಟು 1,83,731 ಮತದಾರು ಮತ ಚಲಾಯಿಸಿದ್ದಾರೆ. ಅಚ್ಚರಿಯ ಫಲಿತಾಂಶಕ್ಕೆ ರಾಜಕೀಯ ಮುಖಂಡರಷ್ಟೇ ಅಲ್ಲ. ಮತದಾರರು ಕೂಡ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

Intro:ಹುಣಸೂರು ಬೈ ಎಲೆಕ್ಷನ್ ಪ್ಯಾಕೇಜ್

Body:ಹುಣಸೂರು ಬೈ ಎಲೆಕ್ಷನ್ ಪ್ಯಾಕೇಜ್

Conclusion:ಅನರ್ಹರು ಅರ್ಹರಾಗುತ್ತಾರೋ, ಅನರ್ಹರಾಗಿಯೇ ಉಳಿಯುತ್ತಾರೆ? ಮತದಾರನ ಗುಟ್ಟು ಕುತೂಹಲ
ಮೈಸೂರು:
ವಾಯ್ಸ್:
ಒಂದು ತಿಂಗಳಿನಿಂದ ಹುಣಸೂರು ತಾಲ್ಲೂಕಿನಲ್ಲಿ ಹಿಡಿದಿದ್ದ 'ಉಪಚುನಾವಣೆ ಗ್ರಹಣ' ನಾಳೆ(ಡಿ.9)ಬಿಡುವ ಸಮಯ ಬಂದಾಯ್ತು, ಅನರ್ಹ ಪಟ್ಟ ಅಳಿಸಿ ಹಾಕಿ 'ಅರ್ಹತೆ' ಕೊಡುತ್ತಾರೋ ಅಥವಾ ಅನರ್ಹರಾಗಿಯೇ ಉಳಿಯುವಂತೆ ಮಾಡುತ್ತಾನಾ ಮತದಾರ ಎಂಬ ತೀವ್ರ ಕುತೂಹಲ ಹುಣಸೂರು ತಾಲ್ಲೂಕಿನಾದ್ಯಂತ ಕೆರಳಿಸಿದೆ.

ವಿಡಿಯೋ1: ಹೌದು, ನ.5ರಂದು ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಒಬ್ಬೊರ ಮೇಲೊಬ್ಬರು ಕಟುವಾಗಿ ಟೀಕಿಸುತ್ತ 'ಅಂತರಂಗ' ಮಾತುಗಳನ್ನು 'ಬಹಿರಂಗ'ಗೊಳಿಸಿದರು. ನಮ್ಮನ್ನೇ ಗೆಲ್ಲಿಸಿ ಎಂದು ಮೂರು ಪಕ್ಷಗಳ ಮುಖಂಡರ ಅಸ್ತ್ರಗಳ ಮೇಲೆ ಅಸ್ತ್ರಗಳ ಪ್ರಾಯೋಗಿಸಿದರು. ಮತದಾರರು ಇವರ ಮಾತುಗಳಿಗೆ ತಲೆದೂಗಿದ.ಒಂದು ತಿಂಗಳಿನಿಂದ ತಾಲ್ಲೂಕಿನ ಯಾವ ದಿಕ್ಕಿನಿಲ್ಲಿ ನೋಡಿದರೆ ಚುನಾವಣೆ ಜ್ವರವೇ ಆವರಿಸಿಕೊಂಡಿತ್ತು.

ವಿಡಿಯೋ 2: ಚುನಾವಣೆ ಮತಯಾಚನೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಅನರ್ಹ ಎಂದು ಹೇಳಿದೆ.ಇವರಿಗೆ ಮತದಾರರು ಮುದ್ರೆ ಒತ್ತುವುದೇ ಬಾಕಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರಿಸಿದ್ದರು‌.

ವಿಡಿಯೋ3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೃಹತ್ ಸಮಾವೇಶ ಮಾತನಾಡಿ ವಿಶ್ವನಾಥ್ ಅವರ ಅಪೇಕ್ಷೆಯಂತೆ ಕೆಲಸ ಮಾಡುತ್ತೀನಿ ಗೆಲ್ಲಿಸಿ ಕಳುಹಿಸಿ ಎಂದು ವಿನಂತಿ ಮಾಡಿಕೊಂಡಿದ್ದರು.

ವಿಡಿಯೋ4: ರಾಜ್ಯದಲ್ಲಿ ಧ್ರುವೀಕರಣವಲ್ಲ‌.ಶುದ್ಧಿಕರಣವಾಗಬೇಕು.ಅನರ್ಹರಿಗೆ ತಕ್ಕ ಪಾಠ ಕಲಿಸಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಗುಡುಗಿದ್ದರು.

ವಿಡಿಯೋ 5: ಹುಣಸೂರು ತಾಲ್ಲೂಕಿನ ಉಪಕದನದಲ್ಲಿ ಹಾಲಿ ಸಿಎಂ ಯಡಿಯೂರಪ್ಪ ,ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತಿನ ಗುಡುಗು ಮಿಂಚು ತರಿಸಿದ್ದರು.ಯಾರ ಮಾತಿಗೆ ಯಾವ ಮನ್ನಣೆ ಕೊಡಲಾಗಿದೆ ಡಿ.5ರಂದು ನಡೆದ ಮತದಾನದಲ್ಲಿ ಮತದಾರ ಗೌಪ್ಯವಾಗಿಟ್ಟಿದ್ದಾನೆ.

ವಿಡಿಯೋ 6: ಕಾಂಗ್ರೆಸ್ ಎಚ್.ಪಿ.ಮಂಜುನಾಥ್ , ಬಿಜೆಪಿಯ ಎಚ್.ವಿಶ್ವನಾಥ್, ಜೆಡಿಎಸ್ ಸೋಮಶೇಖರ್ ಅವರಿಗೆ ಡಿ.9ರಂದು ಪ್ರಕಟಗೊಳ್ಳುವ ಫಲಿತಾಂಶದಿಂದ ಎದೆಬಡಿತ ಹೆಚ್ಚಾಗಿದೆ. ನಾಳೆ ಮಧ್ಯಾಹ್ನದ ವರೆಗೆ ರಿಸೆಲ್ಟ್ ಯಾರ ಮುಖದಲ್ಲಿ ಮಂದಹಾಸ ತರುತ್ತೆ ಎನ್ನುವುದೇ ಕುತೂಹಲವಾಗಿದೆ.

ಹುಣಸೂರಿನಲ್ಲಿ‌ ಪುರುಷರು 1,14,580 ಮಹಿಳೆಯರು 1,13,388 ಇತರೆ 6 ಒಟ್ಟು 2,27,974 ಮತದಾರ ಪೈಕಿ ಶೇ.80.59ರಷ್ಟು ಮತದಾನವಾಗಿದೆ.‌ 93,157 ಪುರುಷರು, 90,573 ಮಹಿಳೆಯರು, ಒಂದು ಇತರರು ಸೇರಿದಂತೆ ಒಟ್ಟು 1,83,731ಮತದಾನವಾಗಿದೆ‌. ಅಚ್ಚರಿಯ ಫಲಿತಾಂಶಕ್ಕೆ ರಾಜಕೀಯ ಮುಖಂಡರೇ ಅಲ್ಲ. ಮತದಾರನ್ನು ಕೂಡ ಚಾತಕಪಕ್ಷಿಯಂತೆ ಕಾಯುತ್ತಿದ್ದಾನೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.