ETV Bharat / state

ಸಾಂಸ್ಕೃತಿಕ ನಗರಿಯಿಂದ ಇತರೆ ಜಿಲ್ಲೆಗಳಿಗೆ ಬಸ್​ ಸಂಚಾರ ಆರಂಭ - lockdown news

ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳಿಂದ ಇಂದು ಬೆಳಿಗ್ಗೆ 7 ಗಂಟೆಯಿಂದ 100 ಬಸ್​​ಗಳ ಸಂಚಾರ ಆರಂಭಿಸಲಾಗಿದೆ.

Buses from Mysore City to other districts
ಸಾಂಸ್ಕೃತಿಕ ನಗರಿಯಿಂದ ಇತರೆ ಜಿಲ್ಲೆಗಳಿಗೆ ಬಸ್​ ಸಂಚಾರ
author img

By

Published : May 19, 2020, 1:35 PM IST

ಮೈಸೂರು: ಲಾಕ್​ಡೌನ್ ಸಡಿಲಿಕೆ ನಂತರ ಇಂದಿನಿಂದ ಬಸ್ ಸಂಚಾರ ಆರಂಭವಾಗಿದ್ದು, ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳಿಂದ ಇಂದು ಬೆಳಿಗ್ಗೆ 7 ಗಂಟೆಯಿಂದ 100 ಬಸ್​​​ಗಳ ಸಂಚಾರ ಆರಂಭಿಸಲಾಗಿದೆ. ನಗರದಿಂದ ಬೆಂಗಳೂರು, ಚಾಮರಾಜನಗರ, ಹಾಸನ, ತುಮಕೂರು, ಶಿವಮೊಗ್ಗ ಸೇರಿದಂತೆ ಸಂಜೆ 7 ಗಂಟೆಯ ಒಳಗೆ ತಲುಪಲು ಸಾಧ್ಯವಾಗುವ ಜಿಲ್ಲೆಗಳಿಗೆ ಬಸ್​ ಸಂಚಾರ ಆರಂಭಿಸಲಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಹುಬ್ಬಳ್ಳಿ, ಬೆಳಗಾವಿ ಕಡೆ ಬಸ್ ಸಂಚಾರ ಇರುವುದಿಲ್ಲ. ಜೊತೆಗೆ ಹೊರ ರಾಜ್ಯಗಳಿಗೂ ಬಸ್ ಸಂಚಾರ ಇರುವುದಿಲ್ಲ.

ಏನೆಲ್ಲಾ ಮುನ್ನೆಚ್ಚರಿಕೆ?

ಕೊರೊನಾ ಸೋಂಕು ಹರಡದಂತೆ ನಿನ್ನೆಯಿಂದಲೇ ಬಸ್​ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಬಸ್ ಹತ್ತುವಾಗ ಸ್ಯಾನಿಟೈಸರ್ ಮಾಡಲಾಗುತ್ತಿದ್ದು, ಇದಕ್ಕೂ ಮುನ್ನ ಟಿಕೆಟ್ ಪಡೆಯುವಾಗ ಪ್ರತಿಯೊಬ್ಬ ಪ್ರಯಾಣಿಕ ತನ್ನ ವಿಳಾಸ, ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.