ಮೈಸೂರು:ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿ ಪರಾರಿಯಾಗುತ್ತಿದ್ದ ಯುವಕನನ್ನು ವಿ.ವಿ ಪುರಂ ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಿರಿಯಾಪಟ್ಟಣದ ಮಂಚೇಗೌಡ ಕೊಪ್ಪಲಿನ ನಿವಾಸಿಯಾದ ಅಮೃತ್ (21) ಎಂಬಾತನು ಪ್ರೀತಿ ಮಾಡು ಎಂದು ಹೆಬ್ಬಾಳ್ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದ. ಈ ಪಾಗಲ್ ಪ್ರೇಮಿಯ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಮೃತ್ ತನ್ನ ಸ್ನೇಹಿತರನ್ನು ಕರೆದುಕೊಂದು ಹೋಗಿ ಯುವತಿ ನಡೆದುಕೊಂಡು ಹೋಗುವ ವೇಳೆ , ಆಕೆಯ ಮೇಲೆ ತನ್ನ ಸ್ನೇಹಿತರಿಂದ ರೇಜರ್ನಿಂದ ಹಲ್ಲೆ ಮಾಡಿಸಿದ್ದಾನೆ. ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.
![love](https://etvbharatimages.akamaized.net/etvbharat/prod-images/kn-mys-3-crime-news-7208092_06122019130204_0612f_1575617524_520.jpg)
ಇನ್ನು ದೂರಿನ ಮೇರೆಗೆ ವಿಚಾರಣೆ ಮಾಡಿದ ಪೋಲಿಸರು ಅಮೃತ್ನನ್ನು ಬಂಧಿಸಿ, ಹಲ್ಲೆ ಮಾಡಿದ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ, ಇನ್ನೂ ಈ ಸಂಬಂಧ ವಿ.ವಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.