ETV Bharat / state

ಕೋವಿಡ್,​ ನಿಫಾ ವೈರಸ್ ಭೀತಿ: ಅಕ್ಟೋಬರ್ ಅಂತ್ಯದವರೆಗೆ ಮೈಸೂರು - ಕೇರಳ ಸಂಚಾರ ಬಂದ್​

ಕೋವಿಡ್​​ ಹಾಗೂ ನಿಫಾ ವೈರಸ್ ಆತಂಕದಿಂದ ಸೆ.7ರಿಂದ ಮೈಸೂರು ಹಾಗೂ ಕೇರಳ ನಡುವೆ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

border-closed-between-mysore-and-kerala-till-end-of-october
ಕೋವಿಡ್,​ ನಿಫಾ ವೈರಸ್ ಭೀತಿ: ಅಕ್ಟೋಬರ್ ಅಂತ್ಯದವರೆಗೆ ಮೈಸೂರು-ಕೇರಳ ಸಂಚಾರ ಬಂದ್​
author img

By

Published : Sep 11, 2021, 1:02 PM IST

ಮೈಸೂರು: ಮಹಾಮಾರಿ ಕೋವಿಡ್​ ಅಬ್ಬರ ಹಾಗೂ ನಿಫಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಕೇರಳ ನಡುವೆ ಸಂಚಾರವನ್ನು ಅಕ್ಟೋಬರ್ ಅಂತ್ಯದವರೆಗೆ ನಿರ್ಬಂಧಿಸಲಾಗಿದೆ. ಇದುವರೆಗೆ ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಸೆ.7ರಿಂದ ಆ್ಯಂಬುಲೆನ್ಸ್ ಹಾಗೂ ಗೂಡ್ಸ್ ವಾಹನ ಹೊರತುಪಡಿಸಿ ಎಲ್ಲ ಸಂಚಾರಕ್ಕೆ ನಿರ್ಬಂಧ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಮಾಧ್ಯಮಗಳೊಂದಿಗೆ ಮಾತನಾಡಿ, ಕೊರೊನಾ ಮೂರನೇ ಅಲೆ ಹಾಗೂ ನಿಫಾ ವೈರಸ್ ಆತಂಕದಿಂದ ಸೆ.7ರಿಂದ ಮೈಸೂರು ಹಾಗೂ ಕೇರಳ ನಡುವೆ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆ್ಯಂಬುಲೆನ್ಸ್ ಹಾಗೂ ಗೂಡ್ಸ್ ವಾಹನಗಳಷ್ಟೇ ಅನುಮತಿ ಇದೆ ಎಂದು ತಿಳಿಸಿದ್ದಾರೆ.

ಅಕ್ಟೋಬರ್ ಅಂತ್ಯದವರೆಗೆ ಮೈಸೂರು-ಕೇರಳ ಸಂಚಾರ ಬಂದ್​

ಈ ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಮೈಸೂರಿನಿಂದ ಕೇರಳಕ್ಕೆ ಹೋಗಿರುವ ಹಾಗೂ ಕೇರಳದಿಂದ ಮೈಸೂರಿಗೆ ಬಂದಿರುವ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಅಲ್ಲಿಯೇ ವಾಸ್ತವ್ಯ ಮುಂದುವರೆಸಬೇಕು‌‌. ನಿಫಾ ವೈರಸ್ ಬಗ್ಗೆ ಬಾವಲಿ ಚೆಕ್ ಪೋಸ್ಟ್ ಬಳಿ ಇರುವ ಗ್ರಾಮ ಹಾಗೂ ಹಾಡಿ ಜನರಿಗೆ ಕರಪತ್ರ ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಂಗಳನಲ್ಲಿ ವಾಸ ಯೋಗ್ಯ ಪರಿಸರ ಇದೆಯಾ?... ಕಲ್ಲಿನ ಮಾದರಿ ಹೇಳುವ ಕಥೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.