ETV Bharat / state

ಶಾಸಕರ ಬ್ಲಾಕ್ ಮೇಲ್ - ಹಣಕ್ಕೆ ಬೇಡಿಕೆ ಇಟ್ಟ ಪತ್ರಕರ್ತ, ವೈದ್ಯನ ಬಂಧನ

ಶಾಸಕರೊಬ್ಬರನ್ನು ಹೆದರಿಸಲು ಬಂದ ವರದಿಗಾರನೋರ್ವನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಐವರು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

author img

By

Published : Apr 19, 2019, 4:09 PM IST

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಮದಾಸ್

ಮೈಸೂರು: ಮಾನಹಾನಿ ವರದಿ ಪ್ರಕಟಿಸುತ್ತೇವೆ ಎಂದು ಶಾಸಕರೊಬ್ಬರನ್ನು ಹೆದರಿಸಲು ಬಂದ ವರದಿಗಾರನೊಬ್ಬನನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.

ಇಂದು ಖಾಸಗಿ ಹೋಟೆಲ್​​ನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ ರಾಮದಾಸ್, ತಮ್ಮ ಬಗ್ಗೆ ಮಾನಹಾನಿ ವರದಿ ಪ್ರಕಟಿಸುವ ಸಂಬಂಧ ಕಳೆದ 1 ವಾರದಿಂದ ಪತ್ರಿಕಾ ಸಂಪಾದಕ ಹಾಗೂ ವರದಿಗಾರ ಸೇರಿದಂತೆ ಹಲವು ವ್ಯಕ್ತಿಗಳು ಸ್ಥಳೀಯ ವೈದ್ಯರ ಮೂಲಕ 25 ಲಕ್ಷ ರೂ. ನೀಡುವಂತೆ ನನ್ನನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಮದಾಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿಲಾಗಿದ್ದು, ಇದರಲ್ಲಿ ಓರ್ವ ಜಾಮೀನು​ ಪಡೆದು ಹೊರಬಂದಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನು ಐವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಕುವೆಂಪು ನಗರ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದು ಶಾಸಕ ರಾಮದಾಸ್ ತಿಳಿಸಿದರು. ಈ ಬಗ್ಗೆ ತಮ್ಮ ಸಹಾಯಕ ಮುದ್ದುಕೃಷ್ಣ ಎಂಬವರ ಮೂಲಕ ಶಾಸಕರು ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Intro:ಮೈಸೂರು: ಮಾನಹಾನಿ ವರದಿ ಪ್ರಕಟಿಸುತ್ತೇವೆ ಎಂದು ಶಾಸಕರನ್ನು ಬ್ಲಾಕ್ ಮೇಲ್ ಮಾಡಲು ಬಂದ ವಾರ ಪತ್ರಿಕೆಯ ವರದಿಗಾರರನ್ನು ಕುವೆಂಪುನಗರ ಪೋಲಿಸರು ಬಂದಿಸಿದ್ದಾರೆ.

Body:ಇಂದು ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾನಹಾನಿ ವರದಿ ಪ್ರಕಟಿಸುವ ಸಂಬಂಧ ಕಳೆದ ೧ ವಾರದಿಂದ ವಾರ ಪತ್ರಿಕೆಯ ಸಂಪಾದಕ ವರದಿಗಾರ ಸೇರಿದಂತೆ ಹಲವು ವ್ಯಕ್ತಿಗಳು ಸ್ಥಳೀಯ ವೈದ್ಯರ ಮೂಲಕ ೨೫ ಲಕ್ಷ ನೀಡುವಂತೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸಿದರು.
ಇವರನ್ನು ಸ್ಟ್ರೀಂಗ್ ಆಪರೇಷನ್ ಮಾಡಿ ಪೋಲಿಸರಿಗೆ ಹಿಡಿದುಕೊಟ್ಟಿದ್ದು ಅದರಲ್ಲಿ ಅಂದು ನಮ್ಮ ಬಳಿ ಡೀಲ್ ಮಾಡಲು ಬಂದಿದ್ದ ಪ್ರದೀಪ್ ಎಂಬ ವ್ಯಕ್ತಿಯನ್ನು ಕುವೆಂಪು ನಗರ ಪೋಲಿಸರು ಬಂದಿಸಿದ್ದು ಈ ಡೀಲ್ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಡಾ. ಮದು ಎಂಬುವರನ್ನು ಬಂದಿಸಿದ್ದು ಅವರು ಪೋಲಿಸ್ ಠಾಣೆಯ ಬೇಲ್ ಸಿಕ್ಕಿದೆ ಉಳಿದ ೫ ಜನ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.
ಈ ಸಂಬಂಧ ತಮ್ಮ ಸಹಾಯಕ ಮುದ್ದುಕೃಷ್ಣ ಮೂಲಕ ಶಾಸಕ ರಾಮದಾಸ್ ದೂರನ್ನು ಕುವೆಂಪುನಗರ ಠಾಣೆಯಲ್ಲಿ ದಾಖಲಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.