ETV Bharat / state

ಬ್ಲ್ಯಾಕ್ ಫಂಗಸ್ ಗುಣಪಡಿಸುವ ಕಾಯಿಲೆ, ಭಯ ಬೇಡ : ಡಾಕ್ಟರ್ ಸಲಹೆ

ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆದರೆ ಕಾಯಿಲೆಯನ್ನು ಗುಣಪಡಿಸಬಹುದು. ಸಂಪೂರ್ಣವಾಗಿ ಗುಣಪಡಿಸಲು 2 ರಿಂದ 3 ವಾರ ಬೇಕಾಗುತ್ತದೆ..

ಡಾಕ್ಟರ್ ಸಲಹೆ
ಡಾಕ್ಟರ್ ಸಲಹೆ
author img

By

Published : May 24, 2021, 7:53 PM IST

ಮೈಸೂರು: ಬ್ಲಾಕ್ ಫಂಗಸ್ ಬಗ್ಗೆ ಭಯ ಬೇಡ, ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಡಾ.ಪ್ರವೀಣ್ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್ ರೋಗಿಗಳಲ್ಲಿ ಅದರಲ್ಲೂ ಡಯಾಬಿಟಿಸ್ ಇರುವ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂತವರಲ್ಲಿ ಈ ಬ್ಲ್ಯಾಕ್ ಫಂಗಸ್ ಕಂಡುಬರುತ್ತದೆ. ಇದರ ಲಕ್ಷಣಗಳೆಂದರೆ ನೆಗಡಿ, ಮೂಗು ಕಟ್ಟುವುದು, ಮುಖ ಹಾಗೂ ಕಣ್ಣು ಊತವಾಗುವುದು, ಚಳಿ ಜ್ವರ ಬರುವುದು ಇದರ ಲಕ್ಷಣಗಳಾಗಿವೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಪ್ರವೀಣ್

ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆದರೆ ಕಾಯಿಲೆಯನ್ನು ಗುಣಪಡಿಸಬಹುದು. ಸಂಪೂರ್ಣವಾಗಿ ಗುಣಪಡಿಸಲು 2 ರಿಂದ 3 ವಾರ ಬೇಕಾಗುತ್ತದೆ. ಮೈಸೂರಿನ ಸರ್ಕಾರಿ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.