ETV Bharat / state

ಪಠ್ಯದಿಂದ 'ಸಂವಿಧಾನ ಶಿಲ್ಪಿ' ಪದ ತೆಗೆದಿದ್ದಕ್ಕೆ ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ - ನೂತನ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಶಾಸಕ ಹರ್ಷವರ್ಧನ ಪ್ರತಿಕ್ರಿಯೆ

ಬೊಮ್ಮಾಯಿ ಅವರು ಜೂನ್ 8 ರಂದು ಮೈಸೂರಿಗೆ ಬರುತ್ತಿದ್ದಾರೆ. ಅಂದು ರಾಜಕೀಯ ಮುತ್ಸದ್ಧಿ, ಹಿರಿಯ ಸಂಸತ್ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಭೇಟಿ ಮಾಡಿ, ಹಳೆಯ ಪಠ್ಯವನ್ನೇ ಮುಂದುವರೆಸುವಂತೆ ಒತ್ತಾಯಿಸುತ್ತೇವೆ. ಜೊತೆಗೆ ನೂತನ ಪಠ್ಯ ಪರಿಷ್ಕರಣೆ ಮಾಡಿ ‘ಸಂವಿಧಾನ ಶಿಲ್ಪಿ' ಎಂಬ ಪದ ತೆಗೆದಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತೇವೆ ಎಂದು ಶಾಸಕ ಹರ್ಷವರ್ಧನ ಹೇಳಿದ್ದಾರೆ.

ಪಠ್ಯದಿಂದ ಸಂವಿಧಾನ ಶಿಲ್ಪಿ ಪದ ತೆಗೆದಿದ್ದಕ್ಕೆ ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ

author img

By

Published : Jun 7, 2022, 3:27 PM IST

ಮೈಸೂರು: ಪರಿಷ್ಕೃತ ಪಠ್ಯದಿಂದ 'ಸಂವಿಧಾನ ಶಿಲ್ಪಿ' ಎಂಬ ಪದವನ್ನು ತೆಗೆದಿರುವುದು ಅತ್ಯಂತ ಖಂಡನೀಯ. ಆ ಪದವನ್ನು ತೆಗೆಯುವ ಅಗತ್ಯ ಏನಿತ್ತೋ ತಿಳಿಯದು. ಆದರೆ, ಇಂತಹ ವಿಚಾರಗಳನ್ನು ನಾವು ಸಹಿಸುವುದಿಲ್ಲ ಹಾಗೂ ಖಂಡಿತ ರಾಜಿಯಾಗುವ ಪ್ರಶ್ನೆಯೂ ಇಲ್ಲ ಎಂದು ಶಾಸಕ ಬಿ. ಹರ್ಷವರ್ಧನ್ ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಾನು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂನ್ 8 ರಂದು ಮೈಸೂರಿಗೆ ಬರುತ್ತಿದ್ದಾರೆ. ಅಂದು ರಾಜಕೀಯ ಮುತ್ಸದ್ಧಿ, ಹಿರಿಯ ಸಂಸತ್ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಭೇಟಿ ಮಾಡಿ, ಹಳೆಯ ಪಠ್ಯವನ್ನೇ ಮುಂದುವರೆಸುವಂತೆ ಒತ್ತಾಯಿಸುತ್ತೇವೆ.

ಜೊತೆಗೆ ನೂತನ ಪಠ್ಯ ಪರಿಷ್ಕರಣೆ ಮಾಡಿ ‘ಸಂವಿಧಾನ ಶಿಲ್ಪಿ' ಎಂಬ ಪದ ತೆಗೆದಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಮುಜುಗರಕ್ಕೊಳಗಾಗುವ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸುತ್ತೇವೆ ಎಂದು ಎಂದಿದ್ದಾರೆ.

ಪಠ್ಯದಿಂದ ಸಂವಿಧಾನ ಶಿಲ್ಪಿ ಪದ ತೆಗೆದಿದ್ದಕ್ಕೆ ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ
ಪಠ್ಯದಿಂದ ಸಂವಿಧಾನ ಶಿಲ್ಪಿ ಪದ ತೆಗೆದಿದ್ದಕ್ಕೆ ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ

ರಾಷ್ಟ್ರೀಯತೆಯ ಪರಿಕಲ್ಪನೆ, ನ್ಯಾಯ ಮತ್ತು ಸಮಾನತೆಯ ಆಶಯಗಳಿಗೂ ಅಂಬೇಡ್ಕರ್ ಅವರು ಬರೆದ ನೂರಾರು ಲೇಖನಗಳಿಗೂ ಆಂತರಿಕ ಸಂಬಂಧವಿದೆ. ಹಾಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಹೌದು ಮತ್ತು ಎಂದೆಂದಿಗೂ ಸಂವಿಧಾನ ಶಿಲ್ಪಿಯೇ ಎಂದು ಹರ್ಷವರ್ಧನ್ ಹೇಳಿದ್ದಾರೆ.

ಇದನ್ನೂ ಓದಿ: ಚಡ್ಡಿಯೊಳಗೆ ಏನೂ ಇಲ್ಲ, ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಕುದುರಿದೆಯಷ್ಟೇ: ಕುಮಾರಸ್ವಾಮಿ ವ್ಯಂಗ್ಯ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.