ಮೈಸೂರು : ಮೂವರು ಬೈಕ್ ಖದೀಮರನ್ನು ಬಂಧಿಸಿ ಅವರುಗಳಿಂದ 2 ಲಕ್ಷ ರೂ.ಮೌಲ್ಯದ 2 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಡಿ ಮೊಹಲ್ಲಾದ ಮೀನಾ ಬಜಾರ್ ನಿವಾಸಿ ಮಹ್ಮದ್ ಫಿರ್(19), ಬನ್ನಿಮಂಟಪದ ಹಲೀಂ ನಗರದ ನಿವಾಸಿ ಕೈಸರ್ ಪಾಷಾ(19) ಹಾಗೂ ಬನ್ನಿಮಂಪಟದ ಸಲೀಂ(20 ಬಂಧಿತ ಮೂವರು ಬೈಕ್ ಖದೀಮರು. ಹೈವೇ ವೃತ್ತದ ಬಳಿ ಶನಿವಾರ ಎರಡು ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿದ ಪೊಲೀಸರು, ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಸರಸ್ವತಿಪುರಂ ಠಾಣೆ ಹಾಗೂ ವಿಜಯನಗರ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆರೋಪಿಗಳಿಂದ 2 ಲಕ್ಷ ರೂ.ಮೌಲ್ಯದ ಕೆಟಿಎಂ ಬೈಕ್, ಯಮಹಾ ಆರ್‌ಎಕ್ಸ್-100 ಬೈಕ್‌ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.