ETV Bharat / state

ಮೈಸೂರು ಪೊಲೀಸರಿಂದ ಚಾಲಾಕಿ ಬೈಕ್​ ಕಳ್ಳನ ಬಂಧನ!... ಈತ ಕದ್ದಿದ್ದ ಬೈಕ್​ ಎಷ್ಟು ಗೊತ್ತಾ?

author img

By

Published : Sep 9, 2019, 4:31 AM IST

ಬೈಕ್​ ಕಳ್ಳತನ ಮಾಡುತ್ತಿದ್ದ ಚಾಲಕಿ ಕಳ್ಳನನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್​ ಕಳ್ಳನ ಬಂಧನ

ಮೈಸೂರು: ಬೈಕ್ ಕಳ್ಳತನ ಮಾಡುತ್ತಿದ್ದ ಕುಮಾರ್(24) ಎಂಬಾತನನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಎಚ್.ಡಿ.ಕೋಟೆ ತಾಲೂಕಿನ ಗದ್ದಿಗೆ ರಸ್ತೆಯ ಆಲನಹಳ್ಳಿ ಗ್ರಾಮದವನಾಗಿದ್ದು, ಈತನಿಂದ ಸೆ.5ರಂದು ಒಂದು ಬೈಕ್​ ವಶಪಡಿಸಿಕೊಳ್ಳಲಾಗಿತ್ತು. ನಂತರ ವಿಚಾರಣೆ ನಡೆಸಿದಾಗ ತನ್ನ ಸಹಚರನೊಂದಿಗೆ ಸೇರಿ ಮೈಸೂರು ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಈತ ಎಗರಿಸಿದ್ದ 15 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Intro:ಕಳ್ಳತನBody:ಮೈಸೂರು: ಬೈಕ್ ಕಳ್ಳನನ್ನು ಬಂಧಿಸಿ, ಆತನಿಂದ ೧೫ ಲಕ್ಷ ರೂ.ಮೌಲ್ಯದ ೧೨ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಗದ್ದಿಗೆ ರಸ್ತೆಯ ಆಲನಹಳ್ಳಿ ಗ್ರಾಮದ ನಿವಾಸಿ ಕುಮಾರ್(೨೪) ಬಂಧಿತ ಬೈಕ್ ಕಳ್ಳ.  ನಗರದ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು, ಸಿಸಿಬಿ ಘಟಕದ ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ಸೆ.೫ರಂದು ಖಚಿತ ಮಾಹಿತಿ ಮೇರೆಗೆ ಮೈಸೂರು-ಹುಣಸೂರು ರಸ್ತೆಯಲ್ಲಿರುವ ಹೂಟಗಳ್ಳಿಯ ಎಸ್‌ಆರ್‌ಎಸ್ ಕಾಲೋನಿಯ ಕೆಇಬಿ ಕಚೇರಿ ಮುಂಭಾಗ ಕಾರ್ಯಾಚರಣೆ ನಡೆಸಿ ದ್ವಿ ಚಕ್ರ ವಾಹನ ಕಳ್ಳತನ ಆರೋಪಿ ಕುಮಾರ್ ಅಪಾಚ್ಚಿ ಆರ್‌ಟಿಆರ್ ಬೈಕ್ ಸಮೇತ ವಶಕ್ಕೆ ಪಡೆದಿದ್ದಾರೆ.
ಈತನನ್ನು ವಿಚಾರ ಮಾಡಲಾಗಿ ಈತ ತನ್ನ ಸಹಚರನೊಂದಿಗೆ ಸೇರಿ ಮೈಸೂರು ನಗರ, ಮೈಸೂರು ಜಿಲ್ಲೆ ಮತ್ತು ಬೆಂಗಳೂರು ನಗರ
ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿತನಿಂದ ರೂ. ೧೫ ಲಕ್ಷ ರು. ಮೌಲ್ಯದ ಒಟ್ಟು ೧೨ ವಿವಿಧ ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರ ವ್ಯಾಪ್ತಿಯ ೭, ಮೈಸೂರು ಜಿಲ್ಲೆಯ ೨ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ೩ ದ್ವಿಚಕ್ರವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ.Conclusion: ಕಳ್ಳತನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.