ಮೈಸೂರು: ಬೈಕ್ನಲ್ಲಿ ಹೋಗುತ್ತಿರುವಾಗ ಕಾಲುವೆಯ ತಡೆಗೋಡೆಗೆ ಗುದ್ದಿ ನಾಲೆಗೆ ಬಿದ್ದು ವ್ಯಕ್ತಿವೋರ್ವ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಸುವಿನಕಾವಲು ಗ್ರಾಮದಲ್ಲಿ ನಡೆದಿದೆ.
ಪತ್ನಿಯನ್ನು ಆಕೆಯ ತವರು ಮನೆಯಿಂದ ಕರೆತರಲು ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಣಿ (27) ಮೃತ ವ್ಯಕ್ತಿ. ಕಳೆದ ವರ್ಷ ಈತನ ಮದುವೆಯಾಗಿದ್ದು, ಹೆಂಡತಿಯ ತವರು ಮನೆಯಾದ ಕೋಳಿಮನೆ ಗ್ರಾಮದಿಂದ ಕರೆದುಕೊಂಡು ಬರಲು ಮಂಗಳವಾರ ಸಂಜೆ ಸ್ವಗ್ರಾಮದಿಂದ ಬೈಕ್ನಲ್ಲಿ ಹೋಗುವಾಗ ಕಾಲುವೆಯ ತಡೆಗೋಡೆಗೆ ಬೈಕ್ ಗುದ್ದಿದ್ದು, ಮಣಿ ನಾಲೆಗೆ ಬಿದ್ದು ಸಾವನ್ನಪ್ಪಿದ್ದಾನೆ.
ಬೆಟ್ಟದಪುರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ನಾಲೆಯಿಂದ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.