ಮೈಸೂರು: ಬೈಕ್ ಸವಾರನೋರ್ವ ಅಚಾತುರ್ಯದಿಂದ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರ ಕಾರಿಗೆ ಡಿಕ್ಕಿ ಹೊಡೆಸಿರುವ ಘಟನೆ ಸಾಲಿಗ್ರಾಮ ತಾಲೂಕಿನ ರಾಂಪುರ ಜಂಕ್ಷನ್ ಬಳಿ ನಡೆದಿದೆ. ಘಟನೆಯಿಂದ ಕೋಪಗೊಂಡ ಭವಾನಿ ರೇವಣ್ಣ, ಬೈಕ್ ಸವಾರನ ಮೇಲೆ ಗದರಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಂಗ್ ಸೈಡ್ನಿಂದ ಬಂದ ಬೈಕ್ ಸವಾರನೋರ್ವ ಭವಾನಿ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ತಮ್ಮ ಐಷಾರಾಮಿ ಕಾರಿಗೆ ಅಪಘಾತ ಮಾಡಿದ ಸವಾರನಿಗೆ ಜೆಡಿಎಸ್ ನಾಯಕಿ ತರಾಟೆ ತೆಗೆದುಕೊಂಡಿದ್ದಾರೆ. ಘಟನೆ ನಡೆದ ತಕ್ಷಣ ಕಾರನ್ನು ನಿಲ್ಲಿಸಿದ್ದು, ಬೈಕ್ ಸವಾರನನ್ನು ಸ್ಥಳದಲ್ಲಿಯೇ ನಿಲ್ಲಿಸಿಕೊಂಡು ಗದರಿದ್ದಾರೆ. ಇದೆಲ್ಲವನ್ನೂ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
-
ಸಮಾಧಾನ ಮಾಡ್ಕೋಳ್ಳಿ ಅಕ್ಕೋ, ಶ್ರೀಮತಿ ಭವಾನಿ ರೇವಣ್ಣ, 😃 ಮಾನವೀಯತೆಗಿಂತ ದುಡ್ಡು ಮುಖ್ಯ ಅಲ್ವಾ ಅಕ್ಕ #Karnataka pic.twitter.com/ExKTKg50Bw
— Roopa (ಕನ್ನಡತಿ ) (@Roopa_siddu07) December 3, 2023 " class="align-text-top noRightClick twitterSection" data="
">ಸಮಾಧಾನ ಮಾಡ್ಕೋಳ್ಳಿ ಅಕ್ಕೋ, ಶ್ರೀಮತಿ ಭವಾನಿ ರೇವಣ್ಣ, 😃 ಮಾನವೀಯತೆಗಿಂತ ದುಡ್ಡು ಮುಖ್ಯ ಅಲ್ವಾ ಅಕ್ಕ #Karnataka pic.twitter.com/ExKTKg50Bw
— Roopa (ಕನ್ನಡತಿ ) (@Roopa_siddu07) December 3, 2023ಸಮಾಧಾನ ಮಾಡ್ಕೋಳ್ಳಿ ಅಕ್ಕೋ, ಶ್ರೀಮತಿ ಭವಾನಿ ರೇವಣ್ಣ, 😃 ಮಾನವೀಯತೆಗಿಂತ ದುಡ್ಡು ಮುಖ್ಯ ಅಲ್ವಾ ಅಕ್ಕ #Karnataka pic.twitter.com/ExKTKg50Bw
— Roopa (ಕನ್ನಡತಿ ) (@Roopa_siddu07) December 3, 2023
ಇದೇ ವೇಳೆ ಕಾರು ಸೈಡಿಗೆ ಹಾಕುವಂತೆ ಹೇಳಿದ ಸ್ಥಳೀಯರ ಮೇಲೆಯೂ ಭವಾನಿ ರೇವಣ್ಣ ಕೋಪ ತೋರಿದ್ದು, 'ಕಾರು ರಿಪೇರಿ ಮಾಡಿಸೋಕೆ 50 ಲಕ್ಷ ರೂ. ಹಣ ಬೇಕು. ಯಾರಾದರೂ ನ್ಯಾಯ ಮಾತಾಡೋರು ಐವತ್ ಲಕ್ಷ ಹಣ ಕೊಟ್ಟು ಮಾತಾಡಿ, ಒಂದೂವರೆ ಕೋಟಿ ರೂಪಾಯಿ ಗಾಡಿ ಇದು' ಎಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಅಲ್ಲದೆ, 'ಸಾಲಿಗ್ರಾಮ ಠಾಣೆಯ ಇನ್ಸ್ಪೆಕ್ಟರ್ ಕರೀರಿ. ತಗೊಂಡ್ ಹೋಗಿ ಇವನನ್ನ ಒಳಗೆ ಹಾಕ್ಲಿ' ಎಂದು ಭವಾನಿ ರೇವಣ್ಣ ಗರಂ ಆಗಿದ್ದಾರೆ. ಇದೇ ವೇಳೆ ಸವಾರನನ್ನು ಕರೆದು, ಬೈಕ್ ಪಕ್ಕ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ಭವಾನಿ ರೇವಣ್ಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.