ಮೈಸೂರು: ಕಾರಿನ ಮೇಲೆ ದಾಳಿ ಮಾಡಲು ಬಂದ ಕರಡಿ, ಪೋಸ್ ಕೊಟ್ಟು ವಾಪಸ್ ಹೋಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುವ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ನಾಗರಹೊಳೆ ವ್ಯಾಪ್ತಿಯ ಪೊನ್ನಂಪೇಟೆಗೆ ಹೋಗುವಾಗ ಕರಡಿಯ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ರಸ್ತೆ ಮಧ್ಯೆ ನಿಂತು ದಾಳಿ ಮಾಡಲು ಬಂದು ವಾಪಸ್ ತೆರಳಿದೆ. ನಂತರ ಕಾರಿನಲ್ಲಿದ್ದವರು ಜೋರಾಗಿ ಕಿರುಚಾಡಿದ ಪರಿಣಾಮ, ರಸ್ತೆಯಿಂದ ಕಾಡಿನತ್ತ ವಾಪಸ್ ಹೋಗಿದೆ.
ಓದಿ: ಜನರು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ