ಮೈಸೂರು: ದಿವ್ಯಾಂಗರು ಬೇರೆಡೆ ತೆರಳಲು ಬೇರೆಯವರ ಸಹಾಯ ಅಥವಾ ವಾಹನಗಳ ವ್ಯವಸ್ಥೆ ಮಾಡಬೇಕು. ಕೆಲವರು ಸಹಾಯ ಮಾಡಲು ಹಿಂದೇಟು ಹಾಕ್ತಾರೆ. ವಾಹನಗಳ ರೇಟ್ ಹೇಳಿದ್ರೆ ಎಲ್ಲಿಂದ ತರೋದು ಎಷ್ಟೊಂದು ಹಣವನ್ನ ಎಂಬ ಚಿಂತೆ ವಿಕಲಚೇತನರಿಗೆ ಕಾಡದೇ ಇರದು.
ಇಂತಹ ವ್ಯವಸ್ಥೆಗೆ ಪರಿಹಾರ ಹುಡಕಲು ಮುಂದಾಗಿರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಿಭಾಗದ ಸ್ಟೂಡೆಂಟ್ಸ್ ಗಳು ಆಟೋಮೆಟೆಡ್ ವ್ಹೀಲ್ ಚೇರ್ ವಿತ್ ಗೆಸ್ಟರ್ ಕಂಟ್ರೋಲ್ ಎಂಬ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಅವಿಷ್ಕರಿಸಿದ್ದಾರೆ. ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಶೋಭಾ ಶಂಕರ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ವಿ.ಪಿ.ರೇಷ್ಮಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಎಂ.ಜೇಸನ್, ಎ.ಪಿ.ಮುದ್ದಪ್ಪ, ಬಿ.ಸಹನ, ಎ.ಎಸ್.ಸಂಗೀತಾ ಅವರು ಇಂತಹ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಕಂಡು ಹಿಡಿದಿದ್ದಾರೆ.
ಆಟೋಮೇಟಿಡ್ ವ್ಹೀಲ್ ಚೇರ್ನ ಫೀಚರ್ಗಳು: ಇದರಲ್ಲಿ ನಾಲ್ಕು ಗೇರ್ಗಳಿದ್ದು, ಸುಗಮವಾಗಿ ಎಡ-ಬಲ, ವೃತ್ತವಾಗಿ ತಿರುಗಿಸಬಹುದು. ಅಲ್ಲದೇ ವೇಗಕ್ಕೆ ಕಡಿವಾಣ ಹಾಕಲು ಸೆನ್ಸಾರ್ ಹಾಕಿರುವುದರಿಂದ ಎದುರಿಂದ ಬರುವ ವಾಹನಗಳ ಮೀಟರ್ ಅಂತರ ಇರುವಾಗಲೇ ಆಟೋಮೆಟಿಕ್ ಸ್ಟಾಪ್ ಆಗಲಿದೆ. ವ್ಹೀಲ್ ಚೇರ್ನಲ್ಲಿರುವ ಬಟನ್ ಗಳ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಬಹುದು. ಕೈಗಳಿಗೆ ರಿಮೋಟ್ ಕಂಟ್ರೋಲ್ ಅಳವಡಿಸಿಕೊಂಡು ಕೂಡ ವ್ಹೀಲ್ ಚೇರ್ ಕಂಟ್ರೋಲ್ ಮಾಡಬಹುದು. 12 ತಾಸು ಚಾರ್ಜ್ ಮಾಡಿದರೆ 3 ಗಂಟೆ ಬಿಡುವು ನೀಡದೇ ಸ್ವಯಂ ನಿಯಂತ್ರಣದ ಮೂಲಕ ವ್ಹೀಲ್ ಚೇರ್ ಮೂ ಮಾಡಬಹುದು.
ಸತತ ಎಡರಿಂದ ಮೂರು ತಿಂಗಳುಗಳ ಶಮ್ರದಿಂದ ಇದನ್ನು ವಿದ್ಯಾರ್ಥಿಗಳು ರೆಡಿ ಮಾಡಿದ್ದಾರೆ. ಇವರ ಕಾರ್ಯಕ್ಕೆ ಪೇಟಂಟ್ ಸಿಕ್ಕರೆ ಮಾರುಕಟ್ಟೆಗೆ ಕಡಿಮೆ ಬೆಲೆ ಲಗ್ಗೆ ಇಡಲಿದೆ. 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಸಹಾಯಕ ಪ್ರಾಧ್ಯಾಪಕ ಲೋಕೇಶ್, ಪೇಟೆಂಟ್ ಸಿಕ್ಕರೆ ಇದರಿಂದ ಹಲವಾರು ಮಂದಿ ದಿವ್ಯಾಂಗರಿಗೆ ಅನುಕೂಲವಾಗಲಿದೆ ಎಂದರು.