ETV Bharat / state

ಬಜರಂಗದಳ ನಿಷೇಧ ಅಸಾಧ್ಯ: ಮಾಜಿ ಕೇಂದ್ರ ಸಚಿವ ಸದಾನಂದಗೌಡ - ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್​ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿಕೊಂಡಿದೆ.

Former Union Minister D.V. Sadanand Gowda
ಕೇಂದ್ರ ಮಾಜಿ ಸಚಿವ ಡಿ ವಿ ಸದಾನಂದಗೌಡ
author img

By

Published : May 4, 2023, 8:21 PM IST

ಮೈಸೂರು: ಬಜರಂಗ ದಳ ನಿಷೇಧಿಸುವ ವಿಚಾರ ತುಂಬಾ ನಗು ತರುತ್ತಿದೆ. ಅನ್ಯಾಯ ಮಾಡಿದವರಿಗೆ ದೇವರು ಶಿಕ್ಷೆ ಕೊಡುತ್ತಾರೆ ಎಂದು ಜನರು ನಂಬುತ್ತಾರೆ. ಅದೇ ಪರಿಸ್ಥಿತಿ ಕಾಂಗ್ರೆಸ್ಸಿಗೂ ಬರಲಿದೆ. ಧರ್ಮ ರಕ್ಷಿಸುವ ಸಂಘಟನೆ ನಿಷೇಧಿಸಿದರೆ ಜನ ಚೆನ್ನಾಗಿ ಪಾಠ ಕಲಿಸುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ಹೇಳಿದ್ದಾರೆ.

ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು, ಪ್ರಧಾನಿ ನರೇಂದ್ರ ಮೋದಿಯವರ ಹಾದಿಗೆ ಎಲ್ಲ ನಾಯಕರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಯಾರ ಹಂಗಿಲ್ಲದೇ ಸರ್ಕಾರ ರಚಿಸುತ್ತೇವೆ. 120-130 ಸ್ಥಾನಗಳನ್ನು ಗೆಲ್ಲಲು ಚುನಾವಣಾ ತಂತ್ರಗಳನ್ನು ಹೆಣೆದಿದ್ದೇವೆ ಎಂದರು.

ಈ ದೇಶ ಹಾಗೂ ರಾಜ್ಯವನ್ನು ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದೆ. ಜೆಡಿಎಸ್ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಬಿಜೆಪಿ 9 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಈ ಮೂರು ಪಕ್ಷಗಳು ಎಷ್ಟು ಭರವಸೆಗಳನ್ನು ಜನರಿಗೆ ನೀಡಿದ್ದವು. ಎಷ್ಟನ್ನು ಈಡೇರಿಸಿವೆ ಎಂಬುದರ ಬಗ್ಗೆ ರಿಪೋರ್ಟ್ ಕಾರ್ಡ್​ ಜನರ ಮುಂದಿಟ್ಟು ಮತಯಾಚನೆ ಮಾಡೋಣ. ರಿಪೋರ್ಟ್​ ಕಾರ್ಡ್​ಗಳನ್ನು ಮೌಲ್ಯಮಾಪನ ಮಾಡಲಿ, ತಮಗೆ ಯಾವ ಸರ್ಕಾರ ಬೇಕು ಎಂದು ಜನರೇ ತೀರ್ಮಾನ ಮಾಡಲಿ. ಆ ಮೂಲಕ ಹೊಸದೊಂದು ಚುನಾವಣೆಯ ದಿಕ್ಕನ್ನು ನೀಡೋಣ, ಈ ಚುನಾವಣೆಯನ್ನು ಪ್ರಜಾತಂತ್ರದ ಮೌಲ್ಯದ ಆಶಯದಲ್ಲಿ ನಡೆಸಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಇದಕ್ಕೆ ಬದ್ಧರಾಗಬೇಕು ಎಂದು ನುಡಿದರು.

ರಾಜಕೀಯವನ್ನು ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿದ್ದು ಕಾಂಗ್ರೆಸ್, ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಕಾಂಗ್ರೆಸ್ ಸರ್ಕಾರಗಳಿಂದಲೇ, ಶೇ 85 ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆ ಪಕ್ಷದ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರೇ ಒಪ್ಪಿಕೊಂಡಿದ್ದರು. ಆದರೆ ಕಾಂಗ್ರೆಸ್​ನವರು ಬಿಜೆಪಿ ಸರ್ಕಾರ ಶೇ 40 ಕಮಿಷನ್ ಭ್ರಷ್ಟಚಾರ ಸರ್ಕಾರ ಎಂದು ಸುಮ್ಮನೆ ಆರೋಪಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ನೀಡುತ್ತಿಲ್ಲ. ಹಾಗಾಗಿ ಇವರ ಆರೋಪಗಳನ್ನು ಜನರು ನಂಬಲು ತಯಾರಿಲ್ಲ ಎಂದರು.

ಈ ಚುನಾವಣೆಯಲ್ಲಿ 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರನ್ನು ಸ್ವಂತ ಊರಿನಲ್ಲಿಯೇ ಮನೆಗೆ ಕಳುಹಿಸುವುದು ಬಿಜೆಪಿಯ ಸಾಧನೆಯಾಗಲಿದೆ. ಕಳೆದ ಚುನಾವಣೆಯಲ್ಲಿಯೇ ಸಿದ್ದರಾಮಯ್ಯ ಕೊನೇ ಚುನಾವಣೆ ಎಂದಿದ್ದರು. ಈ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ನಾವೇ ಕೊನೇ ಚುನಾವಣೆ ಮಾಡಲಿದ್ದೇವೆ. ಹತಾಶರಾದವರು ಗೂಂಡಾಗಿರಿ ಮಾಡುತ್ತಾರೆ. ಅಪಪ್ರಚಾರಕ್ಕೆ ಒತ್ತು ಕೊಡುತ್ತಾರೆ. ಸೋಲಿನ ಭಯ ಇರುವವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ. ಈ ಮೂರೂ ಸಿದ್ದರಾಮಯ್ಯ ಅವರಿಗೆ ಅನ್ವಯಿಸಬಹುದು ಎಂದು ಹೇಳಿದರು.

ಜಿಡಿಟಿ ವ್ಯಕ್ತಿಗತ ವಿಶ್ವಾಸಾರ್ಹರಲ್ಲ: ಶಾಸಕ ಜಿ.ಟಿ.ದೇವೇಗೌಡ ಅವರು ವ್ಯಕ್ತಿಗತವಾಗಿ ವಿಶ್ವಾಸಕ್ಕೆ ಅರ್ಹರಲ್ಲ ಎಂಬುದು ಜನರ ಮಾತುಗಳಿಂದಲೇ ತಿಳಿದುಬಂದಿದೆ. ಅವರು ಪಕ್ಷಾಂತರ ಮಾಡಲು ನಿಸ್ಸೀಮರು. ಬಿಜೆಪಿಯಲ್ಲಿದ್ದ ಜಿ.ಟಿ. ದೇವೇಗೌಡ ಅವರು ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿದ್ದರು. ಸಿದ್ದರಾಮಯ್ಯಗೆ ವಿರೋಧ ವ್ಯಕ್ತಪಡಿಸಿ ಬಳಿಕ ಅವರ ಛೇಂಬರ್​ನಲ್ಲಿ ಕಾಣಿಸಿಕೊಂಡರು. ಅಪ್ಪ-ಮಗನಿಗೆ ಟಿಕೆಟ್ ದೊರೆಯುವುದು ಖಾತರಿ ಇಲ್ಲದಿದ್ದಾಗ ನಿರ್ಗಮಿಸಿದರು. ಮರಳಿ ಬಿಜೆಪಿಗೆ ಬರುವ ಯತ್ನ ಮಾಡಿದರು. ಅವರನ್ನು ಮೊದಲೇ ನೋಡಿದ್ದ ನಾವು ಹತ್ತಿರ ಬರುವುದು ಬೇಡ ಎಂದು ಹೇಳಿದೆವು ಎಂದರು.

6-7 ಸ್ಥಾನದಲ್ಲಿ ಗೆಲುವು: ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 6 ರಿಂದ 7 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯಲಿದೆ. ಜಿಲ್ಲೆಯಲ್ಲಿ ಹೊಸ ಇತಿಹಾಸ ಬರೆಯಲಿದ್ದೇವೆ. ನಗರ ವ್ಯಾಪ್ತಿಯ 4 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಸರ್ಕಾರದ 4 ವರ್ಷಗಳ ಆಡಳಿತದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಮತ ಒಟ್ಟುಗೂಡಿದೆ. ಗುರು ಶಿಷ್ಯರು ಮುಖಾಮುಖಿಯಾಗಿದ್ದಾರೆ. ಜೆಡಿಎಸ್ ಮತ ವಿಭಜನೆಯಾಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವಿವರಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ, ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಸಂದೇಶ್ ಸ್ವಾಮಿ ಮತ್ತಿತರರು ಇದ್ದರು.

ಇದನ್ನೂ ಓದಿ: ಬಜರಂಗದಳ ಬ್ಯಾನ್ ವಿಚಾರ ಕಾನೂನು ಪ್ರಕಾರ ನಡೆದರೆ ಬಿಜೆಪಿಯವರಿಗೆ ಏನು ಸಮಸ್ಯೆ: ವೀರಪ್ಪ ಮೊಯ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.